ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ: ಸಿ.ಟಿ. ರವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ: ಸಿ.ಟಿ. ರವಿ
ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಚುನಾವಣೆಯ 8 ಕ್ಷೇತ್ರಗಳನ್ನು ತಲಾ 4ರಂತೆ ಹಂಚಿಕೊಂಡಿವೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, "ಉತ್ತರ ಕರ್ನಾಟಕದ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್‌ಗೆ ಹಾಗೂ ದಕ್ಷಿಣ ಕರ್ನಾಟಕದ ನಾಲ್ಕು ಕ್ಷೇತ್ರಗಳು ಜೆಡಿಎಸ್‌ಗೆ ಎಂಬಂತೆ ಒಪ್ಪಂದ ಮಾಡಿಕೊಂಡಿವೆ. ಎರಡೂ ಪಕ್ಷಗಳ ನಾಯಕರ ವರ್ತನೆಯಿಂದ ಬೇಸತ್ತಿರುವ ಕಾರ್ಯಕರ್ತರು ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಬಿಜೆಪಿ ಪ್ರಚಂಡ ವಿಜಯ ಸಾಧಿಸುವುದು ನಿಶ್ಚಿತ" ಎಂದು ತಿಳಿಸಿದರು.

ಗೆಲುವಿಗಾಗಿ ಬಿಜೆಪಿ ವಿನೂತನ ತಂತ್ರಗಾರಿಕೆ ಅನುಸರಿಸುತ್ತಿದೆ. ಮತಗಳಿಕೆಯ ಜವಾಬ್ದಾರಿಯನ್ನು ಆಯಾ ಬೂತ್‌ಗಳಿಗೆ ವಹಿಸಿರುವುದು ಗೆಲುವಿಗೆ ಸಹಕಾರಿಯಾಗಲಿದೆ. ಈಗಾಗಲೇ ಎಲ್ಲ ಕ್ಷೇತ್ರಗಳಲ್ಲೂ ಮೊದಲ ಹಂತದ ಮನೆ ಮನೆ ಪ್ರಚಾರ ಮುಗಿದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೂ ಕೂಡ ದಕ್ಷಿಣ ಭಾಗದಲ್ಲಿ ಪ್ರಚಾರ ಮುಗಿಸಿ ಇಂದಿನಿಂದ ಉತ್ತರ ಕರ್ನಾಟಕದ ಹುಕ್ಕೇರಿ, ಅರಭಾವಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ರಾಷ್ಟ್ರೀಯ ನಾಯಕರೂ ಸಹ ಪ್ರಚಾರದಲ್ಲಿ ಭಾಗವಹಿಸಲಿದ್ದು, ಅನಂತ್‌ ಕುಮಾರ್, ಗೋಪಿನಾಥ್ ಮುಂಡೆ, ಮನೋಹರ್ ಪರಿಕ್ಕರ್ ಕೂಡ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಚುನಾವಣೆಗೆ ಮುನ್ನವೇ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್, ದೊಡ್ಡಬಳ್ಳಾಪುರದ ಬಿಜೆಪಿ ಅಭ್ಯರ್ಥಿ 50 ಕೋಟಿ ರೂ. ಪಡೆದು ಪಕ್ಷ ತೊರೆದಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ. ಅದು ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ಕಾಂಗ್ರೆಸ್ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ಬಿಡಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐದೂವರೆ ಕೋಟಿ ಜನಗಳ ಸೇವಕ ನಾನು: ಸಿಎಂ
ಸರ್ಕಾರಿ ವಾಹನಗಳಲ್ಲಿ ಕನ್ನಡ ಸಂಖ್ಯಾ ಫಲಕ ಕಡ್ಡಾಯ
ಬೆಂಗಳೂರಿನಲ್ಲಿ ಎನ್ಎಸ್‌ಜಿ ಸ್ಥಾಪನೆಗೆ ಸ್ಥಳ ಶೋಧ
ದಲಿತ ವ್ಯಕ್ತಿ ಪ್ರಧಾನಿಯಾಗಬೇಕು: ಪೇಜಾವರ ಆಶಯ
ದುಬಾರಿ ಶುಲ್ಕವಸೂಲಿ ಮಾಡುತ್ತಿರುವ ನೈಸ್ ವಿರುದ್ಧ ಆಕ್ರೋಶ
ನೈಸ್ ಫೀಸು: ದುಬಾರಿ ಎಂಬುದೆಲ್ಲರ ಅಭಿಪ್ರಾಯ