ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಖೇಣಿಯಿಂದ ಹಗಲು ದರೋಡೆ ತಡೆಯಿರಿ: ಶಾಸಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖೇಣಿಯಿಂದ ಹಗಲು ದರೋಡೆ ತಡೆಯಿರಿ: ಶಾಸಕ
ನೈಸ್ ಸಂಸ್ಥೆ ರಾತ್ರೋರಾತ್ರಿ ದುಬಾರಿ ಶುಲ್ಕ ಸಂಗ್ರಹಿಸಲು ಮುಂದಾಗಿರುವುದು ದುರ್ದೈವದ ವಿಚಾರ ಎಂದು ಆತಂಕ ವ್ಯಕ್ತಪಡಿಸಿರುವ ಶಾಸಕ ನೆ.ಲ. ನರೇಂದ್ರ ಬಾಬು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ಹಗಲು ದರೋಡೆಯನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ನೈಸ್ ಸಂಸ್ಥೆಯ ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿನ್ನೆ ನೈಸ್ ರಸ್ತೆಯಲ್ಲಿ ಶುಲ್ಕಸಂಗ್ರಹ ಕೇಂದ್ರವನ್ನು ನುಚ್ಚುನೂರು ಮಾಡಿದ್ದಾರೆ. ಶುಲ್ಕ ಸಂಗ್ರಹಣೆ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೂಡಲೇ ಕಂಪನಿಯ ಈ ನಿರ್ಧಾರಕ್ಕೆ ತಡೆ ನೀಡುವ ದಿಸೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ನೈಸ್ ಕಂಪನಿಯ ಅಶೋಕ್ ಖೇಣಿಯವರು ಬಿಜೆಪಿ ಸರ್ಕಾರವನ್ನು ಕೈಗೊಂಬೆಯಾಗಿಸಿಕೊಂಡಿದ್ದಾರೆ. ಇಂತಹ ಜನದ್ರೋಹಿ ಕಾರ್ಯವೆಸಗುತ್ತಿರುವುದು ಖಂಡನೀಯ. ಇಂತಹ ಸಂಸ್ಥೆಗಳಿಗೆ ಕಡಿವಾಣ ಹಾಕದಿದ್ದರೆ ಸಾರ್ವಜನಿಕರಿಂದ ಇನ್ನಷ್ಟು ವಿರೋಧವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದರು.

ನೈಸ್ ಸಂಸ್ಥೆ ರಾಜ್ಯದಲ್ಲಿ ಅಭಿವೃದ್ದಿಪಡಿಸುವುದಾಗಿ ತಯಾರಿಸಿರುವ ನೀಲನಕ್ಷೆಗಳನ್ನು ತಿರಸ್ಕರಿಸಬೇಕು. ಮತ್ತು ಖೇಣಿಯವರು ದ್ವಿಚಕ್ರ ವಾಹನ ಚಾಲಕರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದು, ಇದರ ವಿರುದ್ಧ ಸದ್ಯವೇ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಾರ ಜೊತೆಗೂ ಮುನಿಸಿಲ್ಲ: ಸಿದ್ದರಾಮಯ್ಯ
ವಶಪಡಿಸಿಕೊಂಡಿದ್ದ 20 ಲಕ್ಷ ಮರಳಿ ಜೆಡಿಎಸ್‌ಗೆ
ಸಿಇಟಿ ರದ್ದತಿಗೆ ಚಿಂತನೆ: ಸಚಿವ ರಾಮಚಂದ್ರಗೌಡ
ಕುರುಬರ ಮತಯಾಚಿಸಿದ ವರ್ತೂರು: ಕಾಂಗ್ರೆಸ್ ತರಾಟೆ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಲ್.ಬಸವರಾಜು ಆಯ್ಕೆ
ಅಕ್ರಮ ಗಣಿಯಲ್ಲಿ ಧರಂ 'ಕೈ': ಕಾಂಗ್ರೆಸ್‌ಗೆ ತೀವ್ರ ಮುಜುಗರ