ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿಯಲ್ಲಿ ‘ಕೈ’ವಾಡ: ಧರಂ ಉತ್ತರ ಸೋಮವಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿಯಲ್ಲಿ ‘ಕೈ’ವಾಡ: ಧರಂ ಉತ್ತರ ಸೋಮವಾರ
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿರುವ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದರ ಹಿಂದೆ ಬಿಜೆಪಿಯ ಷಡ್ಯಂತ್ರವಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಕಿಡಿಕಾರಿದ್ದಾರೆ.

ಈ ಷಡ್ಯಂತ್ರದ ವಿರುದ್ಧ ಸೋಮವಾರ ಉತ್ತರಿಸುತ್ತೇನೆ. ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ವರದಿ ಬಹಿರಂಗಗೊಂಡಿರುವುದು ರಾಜಕೀಯ ಷಡ್ಯಂತ್ರ. ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ತಮ್ಮ ಆಡಳಿತಾವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಈ ವರದಿ ಕುರಿತು ರಾಜ್ಯಪಾಲರು ಯಾವುದೇ ಸ್ಪಷ್ಟನೆ ಕೇಳದಿದ್ದರೂ ಸೋಮವಾರ ಅವರನ್ನು ಖುದ್ದು ಭೇಟಿಯಾಗಿ ವಿವರ ನೀಡುತ್ತೇನೆ. ಸೋಮವಾರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ಧರಂ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಖೇಣಿಯಿಂದ ಹಗಲು ದರೋಡೆ ತಡೆಯಿರಿ: ಶಾಸಕ
ಯಾರ ಜೊತೆಗೂ ಮುನಿಸಿಲ್ಲ: ಸಿದ್ದರಾಮಯ್ಯ
ವಶಪಡಿಸಿಕೊಂಡಿದ್ದ 20 ಲಕ್ಷ ಮರಳಿ ಜೆಡಿಎಸ್‌ಗೆ
ಸಿಇಟಿ ರದ್ದತಿಗೆ ಚಿಂತನೆ: ಸಚಿವ ರಾಮಚಂದ್ರಗೌಡ
ಕುರುಬರ ಮತಯಾಚಿಸಿದ ವರ್ತೂರು: ಕಾಂಗ್ರೆಸ್ ತರಾಟೆ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಲ್.ಬಸವರಾಜು ಆಯ್ಕೆ