ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ
ಚನ್ನರಾಯಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೆಎಸ್ಆರ್‌ಟಿಸಿ ಬಸ್ ಮತ್ತು ಹಾಲಿನ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವೀಗೀಡಾಗಿದ್ದು, 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚನ್ನರಾಯಪಟ್ಟಣದ ಗೌಡಗೇರ ಬಳಿ ಬೆಳಗ್ಗೆ 11.45ರಲ್ಲಿ ಅಪಘಾತ ಸಂಭವಿಸಿದ್ದು, ಮೃತಪಟ್ಟವರಲ್ಲಿ ಕೆಎಸ್ಆರ್‌ಟಿಸಿ ಬಸ್ ಚಾಲಕ ಮಹದೇವ (40), ಪ್ರೌಢಶಾಲೆಯ ಹಿಂದಿ ಶಿಕ್ಷಕ ಪ್ರದೀಪ್ (26), ಬೆಂಗಳೂರಿನ ವಿಜಯ್ ಕುಮಾರ್ (35) ಸೇರಿದ್ದಾರೆ.

ಇದಲ್ಲದೆ ಕ್ಯಾಂಟರ್‌ನಲ್ಲಿದ್ದ ಮೂವರು ಹಾಗೂ ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರ ಗುರುತು ಸದ್ಯಕ್ಕೆ ಪತ್ತೆಯಾಗಿಲ್ಲ. ತೀವ್ರ ಗಾಯಗೊಂಡರನ್ನು ಆದಿಚುಂಚನಗಿರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇನ್ನೂ ಹಲವು ಗಾಯಾಳುಗಳು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಾಗೂ ಕ್ಯಾಂಟರ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಅಪಘಾತ ಸ್ಥಳದಲ್ಲಿ ಶವಗಳು ರಸ್ತೆಯಲ್ಲಿ ಚೆಲ್ಲಾಡಿದ್ದ ದೃಶ್ಯಗಳು ಭೀಕರವಾಗಿದ್ದವು.

ಪೊಲೀಸರು ಪರಿಹಾರ ಕಾರ್ಯ ಮುಂದುವರಿಸಿದ್ದು, ಮೃತಪಟ್ಟವರ ವಿವರ ಪತ್ತೆಹಚ್ಚಲು ಕೋರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿ ಲೂಟಿಕೋರರ ವಿರುದ್ಧ ಕ್ರಮಕ್ಕೆ ಸಮಿತಿ: ಸಿ.ಎಂ.
ಗಣಿಯಲ್ಲಿ ‘ಕೈ’ವಾಡ: ಧರಂ ಉತ್ತರ ಸೋಮವಾರ
ಖೇಣಿಯಿಂದ ಹಗಲು ದರೋಡೆ ತಡೆಯಿರಿ: ಶಾಸಕ
ಯಾರ ಜೊತೆಗೂ ಮುನಿಸಿಲ್ಲ: ಸಿದ್ದರಾಮಯ್ಯ
ವಶಪಡಿಸಿಕೊಂಡಿದ್ದ 20 ಲಕ್ಷ ಮರಳಿ ಜೆಡಿಎಸ್‌ಗೆ
ಸಿಇಟಿ ರದ್ದತಿಗೆ ಚಿಂತನೆ: ಸಚಿವ ರಾಮಚಂದ್ರಗೌಡ