ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ
PTI
ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಫೆಬ್ರವರಿಯಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

"ಬೆಳಗಾವಿಯಲ್ಲಿ ಜ. 16ರಿಂದ ನಡೆಯುವ ಅಧಿವೇಶನದ ವೇಳೆ ಈ ಸಮ್ಮೇಳನದ ದಿನಾಂಕ ಪ್ರಕಟಿಸಲಾಗುವುದು. ಲೋಕಸಭೆ ಚುನಾವಣೆ ಫೆಬ್ರವರಿಯಲ್ಲಿ ನಡೆಯಬಹುದೆನ್ನುವ ನೀರೀಕ್ಷೆ ಇತ್ತು. ಹಾಗಾಗಿ ವಿಶ್ವಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಈಗ ಚುನಾವಣೆಯನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲು ಆಯೋಗ ನಿರ್ಧರಿಸಿರುವುದರಿಂದ ವಿಶ್ವ ಕನ್ನಡ ಸಮ್ಮೇಳನವನ್ನು ಫೆಬ್ರವರಿಯಲ್ಲಿ ನಡೆಸಲು ಚಿಂತನೆ ಮಾಡಲಾಗಿದೆ. ಫೆಬ್ರವರಿ ಹೊತ್ತಿಗೆ ಲೋಕಸಭೆ ಚುನಾವಣೆ ಘೋಷಣೆಯಾದರೂ ನೀತಿಸಂಹಿತೆಯಿಂದ ಯಾವುದೇ ಅಡ್ಡಿ ಉಂಟಾಗದು" ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ಸಿದ್ಧತೆಯ ಜೊತೆಗೇ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಗಳೂ ನಡೆಯುತ್ತವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಈ ಸಂದರ್ಭದಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಸಲಾಗುವುದು. ವಿಶ್ವದ ಎಲ್ಲ ಭಾಗಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ವಿದೇಶಗಳಲ್ಲಿ ಕನ್ನಡದ ಬಗೆಗಿನ ಅಭಿಮಾನವನ್ನು ನೋಡಿ ನಾವು ಕಲಿಯಬೇಕಾದ್ದು ಬಹಳವಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ
ಗಣಿ ಲೂಟಿಕೋರರ ವಿರುದ್ಧ ಕ್ರಮಕ್ಕೆ ಸಮಿತಿ: ಸಿ.ಎಂ.
ಗಣಿಯಲ್ಲಿ ‘ಕೈ’ವಾಡ: ಧರಂ ಉತ್ತರ ಸೋಮವಾರ
ಖೇಣಿಯಿಂದ ಹಗಲು ದರೋಡೆ ತಡೆಯಿರಿ: ಶಾಸಕ
ಯಾರ ಜೊತೆಗೂ ಮುನಿಸಿಲ್ಲ: ಸಿದ್ದರಾಮಯ್ಯ
ವಶಪಡಿಸಿಕೊಂಡಿದ್ದ 20 ಲಕ್ಷ ಮರಳಿ ಜೆಡಿಎಸ್‌ಗೆ