ಬೆಳಗಾವಿ ಜಿಲ್ಲೆಯ 2 ಕ್ಷೇತ್ರಗಳೂ ಸೇರಿ ಉಪಚುನಾವಣೆ ನಡೆಯಲಿರುವ ಯಾವ ಕ್ಷೇತ್ರದ ಜನತೆಗೂ ಬಿಜೆಪಿಗೆ ಬೆಂಬಲ ನೀಡುವಂತೆ ಕರೆ ನೀಡಿಲ್ಲ. ಈ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಇದನ್ನು ನಂಬಬೇಡಿ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದ ನನ್ನ ಬೆಂಬಲ ಕಾಂಗ್ರೆಸ್‌ಗೆ ಇರುತ್ತದೆ. ಆದರೆ, ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯುವ ಬಗ್ಗೆ ಮಾತ್ರ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿರು. ಪ್ರಚಾರ ಮಾಡುವಂತೆ ಇನ್ನೂ ಹೈಕಮಾಮಡ್ ತಮ್ಮನ್ನು ಸಂಪರ್ಕಿಸಿಲ್ಲ. ಯಾರ್ಯಾರೋ ಹೇಳುವ ಹೇಳಿಕೆಗೂ ನನಗೂ ಏಕೆ ಸಂಬಂಧ ಕಲ್ಪಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಕುರುಬರ ಮತ ಬಿಜೆಪಿಗೆ ಬೆಂಗಳೂರು: ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ತಮಗೆ ಫೋನ್ ಮೂಲಕ ಹೇಳಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರು ಮತ್ತು ಜಿ.ಪಂ. ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಅರಬಾವಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯ ಪ್ರಚಾರ ಸಭೆಗಳಲ್ಲಿ ಅವರು ಈ ವಿಷಯನ್ನು ಪ್ರಚಾರ ಮಾಡುತ್ತಿದ್ದಾರೆ. ಅರಬಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿಯವರ ಹಿಂಬಾಲಕರಾಗಿಯೇ ಜಿ.ಪಂ. ಸದಸ್ಯತ್ವಕ್ಕೆ ಆರಿಸಿ ಬಂದಿರುವ ಸಣ್ಣಕ್ಕಿಯವರು ಉದ್ದೇಶಪೂರ್ವಕವಾಗಿಯೇ ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಸಣ್ಣಕ್ಕಿಯವರು "ನಾನು ಬಿಜೆಪಿಯವನೇ ಆಗಿದ್ದರೂ, ಸಮಾಜದ ವಿಷಯ ಬಂದಾಗ ನಾನು ಸಿದ್ದರಾಮಯ್ಯ ಅವರ ಹಿಂಬಾಲಕ. ಅವರೇ ನಮ್ಮ ಸಮಾಜದ ಅದ್ವಿತೀಯ ನಾಯಕರು. ಅವರಿಗೆ ಕಾಂಗ್ರೆಸ್‌ನಲ್ಲಿ ಅವಮಾನವಗಿದೆ. ಆದ್ದರಿಂದ ಸಿದ್ದರಾಮಯ್ಯನವರು ಫೋನಿನ ಮೂಲಕ ಸೂಚನೆ ಕೊಟ್ಟಿದ್ದಾರೆ. ಇದು ನಿಜ" ಎಂದು ಸಮಜಾಯಿಷಿ ನೀಡುತ್ತಾರೆ. " ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಜೆಡಿಎಸ್ ನಮ್ಮ ಸಮಾಜದ ಅಸಮಾಧಾನ ಎದುರಿಸುತ್ತಿದೆ. ಇದೇ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲೂ ಇದೆ. ಈ ಕಾರಣಕ್ಕಾಗಿ ಇಲ್ಲಿ ಸ್ಪರ್ಧಿಸಿರುವ ಜೆಡಿಎಸ್‌ನ ಅರವಿಂದ ದಳವಾಯಿ ಪೈಪೋಟಿಯಿಂದ ದೂರ ಉಳಿದಿದ್ದಾರೆ" ಎಂದು ಅವರು ತಿಳಿಸಿದರು. ಬಿಜೆಗೆ ಲಾಭ: ಸಿದ್ದರಾಮಯ್ಯ ಅವರ ತಟಸ್ಥ ನಿಲುವಿನಿಂದ ಕಾಂಗ್ರೆಸ್ ಬಗ್ಗೆ ಕುರುಬರಿಗೆ ತಲುಪುವ ವ್ಯತಿರಿಕ್ತ ಸಂದೇಶ ಬಿಜೆಪಿಗೆ ವರವಾಗಲಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವು ಸುಲಭವಾಗಬಹುದು ಎಂದು ವಿಶ್ಲೇಷಿಸುತ್ತಿರುವ ಸಮಯದಲ್ಲೇ ಬೆಳಗಾವಿ ಕುರುಬರ ಸಂಘದ ಅಧ್ಯಕ್ಷರ ಈ ಹೇಳಿಕೆಗಳು ಈ ಸಾಧ್ಯತೆಗಳಿಗೆ ಮತ್ತಷ್ಟು ಪುಷ್ಟಿ ತುಂಬಿವೆ. |