ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟು ಗುರುತಿಸುವಲ್ಲಿ ವಿಫಲ: ಯು.ಆರ್.ರಾವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟು ಗುರುತಿಸುವಲ್ಲಿ ವಿಫಲ: ಯು.ಆರ್.ರಾವ್
"ಕಳೆದೆರಡು ವರ್ಷಗಳಿಂದಲೇ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದರೂ ನಮ್ಮ ಆರ್ಥಿಕ ತಜ್ಞರಿಗೆ ಗೊತ್ತಾಗಲೇ ಇಲ್ಲ. ಎರಡು ತಿಂಗಳ ಈಚೆಗಷ್ಟೇ ಇದರ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಬಾಹ್ಯಾಕಾಶ ವಿಜ್ಞಾನಿ ಡಾ| ಯು.ಆರ್. ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
NRB

ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ನೀಡಲಾದ 'ಕರಾವಳಿ ರತ್ನ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, "ದೇಶವು ಆರ್ಥಿಕ, ಇಂಧನ, ಆಹಾರದ ಸಂಕಷ್ಟ ಎದುರಿಸುತ್ತಿದೆ. ಇಷ್ಟು ವರ್ಷ ಕಳೆದರೂ ನಮ್ಮ ಆಹಾರೋತ್ಪಾದನೆ 220 ಮೆಟ್ರಿಕ್ ಟನ್ ದಾಟಿಲ್ಲ. ಜಿಡಿಪಿ ಹೆಚ್ಚಳದ ಬಗ್ಗೆ ಎಲ್ಲಾ ಆರ್ಥಿಕ ತಜ್ಞರೂ ಮಾತನಾಡುತ್ತಾರೆ. ಆದರೆ ಜಿಡಿಪಿ ಹೆಚ್ಚುತ್ತಿದಂತೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ" ಎಂದು ವಿಶ್ಲೇಶಿಸಿದರು.

ಕರಾವಳಿ ರತ್ನ ಪ್ರಶಸ್ತಿ ಸ್ವೀಕರಿಸಿದ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಒಳ್ಳೆಯ ಕೆಲಸ ಮಾಡಲು ಬಿಡದ ರಾಜಕೀಯ ವಾತವರಣ ಇಂದು ನಿರ್ಮಾಣವಾಗಿದೆ. ಒಳ್ಳೆಯ ವಾತಾವರಣ ನಿರ್ಮಾಣ ಮೊದಲ ಆದ್ಯತೆಯಾಗಬೇಕು ಎಂದರು.

ಸಂಘಟಿತ ದಕ್ಷಿಣ ಕನ್ನಡ ಜಿಲ್ಲೆ ಇರಬೇಕಿತ್ತು. ಸರ್ಕಾರದ ಕ್ರಮದಿಂದಾಗಿ ಕಾಸರಗೋಡು, ಉಡುಪಿ, ಮಂಗಳೂರು ಬೆರೆಬೇರೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಶಿಕ್ಷಣ ಹಾಗೂ ಮಧ್ಯಮವರ್ಗದ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ ಎಂದರು.

ಸಂಗೀತ ನಿರ್ದೇಶಕ ವಿ.ಮನೋಹರ್, ಅಷ್ಟಾವಧಾನಿ ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರಿಗೂ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಡಿನಾಡ ಹೋರಾಟಗಾರ ಮತ್ತು ಸಾಹಿತಿ ಕಯ್ಯಾರ ಕಿಂಞ್ಞಿಣ್ಣ ರೈ ಅನುಪಸ್ಥಿತಿಯಲ್ಲಿ ಅವರ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದರು.

ದ.ಕ. ಸಂಘದ ಅಧ್ಯಕ್ಷ ಎನ್.ಆರ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಮೋಹನ್ ದೇವ್ ಆಳ್ವ, ಹೋಟೆಲ್ ಉದ್ಯಮಿ ಶ್ರೀನಿವಾಸ ರಾವ್, ಸುಬ್ರಹ್ಮಣ್ಯ ಬಾಗಿಲ್ತಾಯ, ಯು.ಪಿ. ವೆಂಕಟೇಶ್, ಕೆ.ಎನ್. ಅಡಿಗ, ವೈ. ಜಯಂತ್‌ ರಾವ್ ಉಪಸ್ಥಿತರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಲ್ಬರ್ಗಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 5 ಬಲಿ
ಚಿತ್ರರಂಗಕ್ಕೆ ನೆರವಾಗುವಂತೆ ಸಾಹಿತಿಗಳಿಗೆ ಕರೆ
ಪೊಲೀಸರನ್ನು ಎಚ್ಚರಿಸಲು ಬಸ್ಸಲ್ಲಿ ನಕಲಿ ಬಾಂಬ್!
ಮಡಿಕೇರಿ: ವಿಚಾರಣಾಧೀನ ಕೈದಿ ಪರಾರಿ
ಪೋಲಿಯೋ: ಆತಂಕ ಹುಟ್ಟುಹಾಕಿದ ವದಂತಿ
ಚೆಲುವರಾಯ ಹೇಳಿಕೆಗೆ ತಿರುಗಿಬಿದ್ದ ರಾಜಣ್ಣ