ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ ಆರೋಪಿಗಳಿಗೆ ಯಾವುದೇ ದಾಕ್ಷಿಣ್ಯ ಇಲ್ಲ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ ಆರೋಪಿಗಳಿಗೆ ಯಾವುದೇ ದಾಕ್ಷಿಣ್ಯ ಇಲ್ಲ: ಸಿಎಂ
NRB
ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಆರೋಪಿಗಾಗಿರುವ ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಯಾರಿಗೂ ದಾಕ್ಷಿಣ್ಯ ತೋರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ದೇವದುರ್ಗ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಪರ ಪ್ರಚಾರಕ್ಕೆಂದು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಲೋಕಾಯುಕ್ತರು ನೀಡಿದ ತನಿಖಾ ವರದಿಯೇ ಅಂತಿಮವಾಗಿದೆ. ಈ ವರದಿಯಲ್ಲಿ ತಪ್ಪಿತಸ್ಥರೆಂದು ಗುರುತಿಸಿದ ವ್ಯಕ್ತಿಗಳು ಎಂತಹ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.

ಕಾನೂನು ಕ್ರಮ ತೆಗೆದುಕೊಳ್ಳಲು ವಿಳಂಬವಾದರೆ 3 ತಿಂಗಳ ನಂತರ ರಾಜಭವನಕ್ಕೆ ತೆರಳಬೇಕಾಗುತ್ತದೆ ಎಂಬ ರಾಜ್ಯ ಲೋಕಾಯುಕ್ತ ಸಂತೋಷ್ ಹೆಗಡೆ ಅವರ ಎಚ್ಚರಿಕೆ ಮಾತಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದೇ ಇಲ್ಲ. ಅಪರಾಧಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಪಚುನಾವಣೆ: ಡಿ.24ರಿಂದ ಮದ್ಯ ಮಾರಾಟ ನಿಷೇಧ
ಗಣಿ ವರದಿ ಸಿಬಿಐ ತನಿಖೆಯಾಗಲಿ: ಧರ್ಮಸಿಂಗ್
ದುಬಾರಿ ಶುಲ್ಕ ಬೇಡ: ಸಿಎಂ ಸೂಚನೆ
ಕುಮಾರ್ ಅವಧಿ ಗಣಿ ಅಕ್ರಮ ತನಿಖೆಯಾಗಲಿ: ಧನಂಜಯಕುಮಾರ್
ಪೋಲಿಯೋ ಆವಾಂತರಕ್ಕೆ ಕಂಪನಿಗಳ ಲಾಬಿ ಕಾರಣ?
ಮರಳಿ 'ಕೈ' ಹಿಡಿಯುವತ್ತ ಬಂಗಾರಪ್ಪ ಚಿತ್ತ