ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸುಳ್ಳು, ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಳ್ಳು, ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕಾಡಿಡಾರ್ ಯೋಜನೆಯ ಕುರಿತು ಮಾಜಿ ಪ್ರಧಾನಿ ದೇವೇಗೌಡ ಮತ್ತು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ನಡುವಿನ ಜಟಾಪಟಿ ಮುಂದುವರೆದಿದೆ.

"ನನ್ನ ಮೇಲೆ ಮಾನನಷ್ಟ ಮೊದದ್ದಮೆ ಯಾವಾಗ ಹಾಕ್ತಾರಂತೆ" ಎಂದು ಗೌಡರು ಕೇಳಿದರೆ, ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್ ಎಂದು ದೇವೇಗೌಡರನ್ನು ಖೇಣಿ ಹೀಗಳೆದಿದ್ದಾರೆ.

ಪತ್ರಿಕಾಗೋಷ್ಠಿ ಮಾತನಾಡಿದ ದೇವೇಗೌಡರು, ಮಾನನಷ್ಟ ಮೊದದ್ದಮೆ ಹೂಡಲು ಮುಂದಾಗಿರುವ ಯಡಿಯೂರಪ್ಪನವರ ಕ್ರಮ ಸ್ವಾಗತಾರ್ಹ. ಈ ನೆಪದಲ್ಲಾದರೂ ನೈಸ್ ಅವ್ಯವಾಹಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಹಂಚಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದ್ದರು.

ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಒಳಗೊಂಡ ಸಮಿತಿ ರಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಿಜೆಪಿ ಖೇಣಿಯವರ ಜೊತೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮೂಲ ಒಪ್ಪಂದದಲ್ಲಿ ಮಾಡಿಕೊಂಡಿದ್ದ ಎಲ್ಲ ನಿಯಮಗಳನ್ನೂ ನೈಸ್ ಸಂಸ್ಥೆ ಗಾಳಿಗೆ ತೂರಿದ್ದು, ಕಾಂಕ್ರಿಟ್ ರಸ್ತೆ ಹಾಕುವ ಬದಲು ಡಾಂಬರು ರಸ್ತೆಮಾಡಿ ಜನರ ಕಣ್ಣಿಗ ಮಣ್ಣೆರಚಿದೆ ಎಂಬುದು ಗೌಡರ ದೂರು.

ಸಂಪರ್ಕ ರಸ್ತೆ ನಿರ್ಮಿಸುತ್ತೇವೆಂದವರು ಈ ವರೆಗೂ ರಸ್ತೆ ನಿರ್ಮಿಸಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸದೆ ಶುಲ್ಕ ವಸೂಲಾತಿಗೆ ಮುಂದಾಗಿರುವುದು ಒಪ್ಪಂದದ ಸ್ಪಷ್ಟ ಉಲ್ಲಂಘನೆ. ಇಷ್ಟಾಗಿಯೂ ಸರ್ಕಾರ ನೈಸ್ ಸಂಸ್ಥೆಯ ಪರವಾಗಿ ನಿಂತಿದೆ ಎಂದರೆ ಏನರ್ಥ? ಎಂದೂ ಗೌಡರು ಪ್ರಶ್ನಿಸಿದ್ದರು.

ಖೇಣಿ ತಿರುಗೇಟು
"ಇಡೀ ಬಿಎಂಐಸಿ ಯೋಜನೆಯನ್ನು 10 ಸಾವಿರ ಕೋಟಿಗೆ ಮಾರಿಬಿಡ್ತೇನೆ ಗೌಡರು ಕೊಂಡುಕೊಳ್ಳಾರಾ? ಕೇಳ್ರಿ.." ಹೀಗೆಂದು ಹರಿಹಾಯ್ದ ಖೇಣಿ, ನಾನು ಬಿಎಂಐಸಿ ಯೋಜನೆಯಿಂದ 30 ಸಾವಿರ ಕೋಟಿ ರೂ. ಲಾಭ ಮಾಡುತ್ತಿದ್ದೇನೆಂದು ಗೌಡರು ಹೇಳಿದ್ದಾರೆ. ಗೌಡರು ಇದನ್ನು ಕೊಂಡುಕೊಂಡು 20 ಸಾವಿರ ಕೋಟಿ ಲಾಭ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ ಎಂದು ಗೌಡರ ವಿರುದ್ಧ ಕಿಡಿಕಾರಿದ್ದಾರೆ.

ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್
"ನೈಸ್ ಸಂಸ್ಥೆಯ ಟೋಲ್ಗೇಟ್ ಧ್ವಂಸ ಮಾಡಿರುವುದು ಜೆಡಿಎಸ್ ಕಾರ್ಯಕರ್ತರು. ದೇವೇಗೌಡರೇ ತಮ್ಮ ಕಾರ್ಯತರ್ಕರನ್ನು ಬಿಟ್ಟು ಈ ರೀತಿಯ ಗೂಂಡಾಗಿರಿ ಮಾಡಿಸಿದ್ದಾರೆ ಎಂದು ನೇರ ಆರೋಪ ಮಾಡಿರುವ ಖೇಣಿ ಇದರಿಂದ ಸಂಸ್ಥೆಗೆ 50 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಸುಳ್ಳು ಹೇಳುವುದನ್ನು ಮತ್ತು ಗೂಂಡಾಗಿರಿ ಮಾಡಿರುವುದನ್ನು ಇನ್ನಾದರೂ ಬಿಡಿ ಓಲ್ಡ್ ಮ್ಯಾನ್ ಎಂದು ಅವರು ದೇವೇಗೌಡರನ್ನುದ್ದೇಶಿಸಿ ವ್ಯಂಗ್ಯವಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಲಾಲು ಸಂಬಂಧಿ' ಎಂದ ವಂಚಕಿ 'ಮಾವನ' ಮನೆಗೆ
ನೈಸ್‌ಗೆ ಗೌಡರೇ ವಿಘ್ನ: ಖೇಣಿ ಕಿಡಿಕಿಡಿ
ಗಣಿ ವರದಿ ಅಧಿವೇಶನದಲ್ಲಿ ಚರ್ಚೆಯಾಗಲಿ: ಕುಮಾರಸ್ವಾಮಿ
ಗಣಿ ಆರೋಪಿಗಳಿಗೆ ಯಾವುದೇ ದಾಕ್ಷಿಣ್ಯ ಇಲ್ಲ: ಸಿಎಂ
ಉಪಚುನಾವಣೆ: ಡಿ.24ರಿಂದ ಮದ್ಯ ಮಾರಾಟ ನಿಷೇಧ
ಗಣಿ ವರದಿ ಸಿಬಿಐ ತನಿಖೆಯಾಗಲಿ: ಧರ್ಮಸಿಂಗ್