ಚೆನ್ನಿಗಪ್ಪ ಸಚಿವರಾಗಿದ್ದಾಗ ಮಾಡಿದ ಆರೋಪಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಮುಚ್ಚಿಟ್ಟು ಗಣಿ ಹಗರಣವನ್ನು ಲೋಕಾಯುಕ್ತರು ತನಿಖೆ ನಡೆಸಿರುವುದು ಏಕೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರ ಕೇವಲ ಆಯ್ದ ವಿಷಯಗಳ ಬಗ್ಗೆಯಷ್ಟೇ ಲೋಕಾಯುಕ್ತರಿಂದ ತನಿಖೆ ಮಾಡಿಸಿದೆ. ತನಗೆ ಬೇಕಾದ ರೀತಿಯಲ್ಲಿರುವ ಈ ವರದಿಯನ್ನು ಪ್ರತಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಲು ಸರ್ಕಾರ ಯೋಜಿಸಿರುವಂತಿದೆ ಎಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಆರೋಪಿಸಿದರು.ಪ್ರಮುಖ ಪ್ರಕರಣಗಳನ್ನು ತನಿಖೆಯಿಂದ ಹೊರಗಿಡಲಾಗಿದೆ. ಈಗ ಲೋಕಾಯುಕ್ತರು ಒಪ್ಪಿಸಿರುವ ವರದಿಯಲ್ಲಿನ ಕೆಲ ಭಾಗಗಳನ್ನು ಮಾತ್ರ ಆಯ್ದು ಮಾಧ್ಯಮಗಳಿಗೆ ನೀಡಲಾಗಿದೆ. ಆದ್ದರಿಂದ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಯಬೇಕಾದ ಅವಶ್ಯಕತೆಯಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಅವರು ಆಗ್ರಹಿಸಿದರು. |