ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜಾತಿ ಹೆಸರಿನಲ್ಲಿ ಸಿಎಂ ಮತ ಯಾಚನೆ: ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾತಿ ಹೆಸರಿನಲ್ಲಿ ಸಿಎಂ ಮತ ಯಾಚನೆ: ಆರೋಪ
ಜಾತಿ ಹಾಗೂ ಧರ್ಮದ ಹೆಸರಿನ ಆಧಾರದಲ್ಲಿ ಮತ ಬೇಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪವನರ ವಿರುದ್ಧ ಚುನಾವಣಾ ಆಯೋಗ ಕೂಡಲೆ ಕ್ರಮ ತೆಗೆದುಕೊಳ್ಳಬೇಕೆಂದು ಕೆಪಿಸಿಸಿ ವಕ್ತಾರ ವಿ.ಆರ್. ಸುದರ್ಶನ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿ ಯಡಿಯೂರಪ್ಪನವರು ರಾಯಚೂರಿನಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುತ್ತಾ ಚುನಾವಣಾ ನೀತಿಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಇಷ್ಟಾದರೂ ಆಯೋಗ ಎಚ್ಚರ ವಹಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ" ಎಂದು ಆರೋಪಿಸಿದರು.

ಲೋಕಾಯುಕ್ತರು ಬಿಡುಗಡೆ ಮಾಡಿರುವ ಅಕ್ರಮ ಗಣಿಗಾರಿಕೆ ವರದಿಯನ್ನು ಬಿಜೆಪಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅನವಶ್ಯಕವಾಗಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಪ್ರಸ್ತಾಪಿಸಿ ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದೆ ಎಂದರು.

ಲೋಕಾಯುಕ್ತರ ವರದಿಯಲ್ಲಿ ತನಗೆ ಬೇಕಾದ ತುಣುಕುಗಳನ್ನು ಮಾತ್ರ ಬಿಡುಗಡೆ ಮಾಡಿರುವ ಬಿಜೆಪಿ, ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಇದರ ಬದಲು ವರದಿಯನ್ನು ಸಂಪೂರ್ಣ ಬಿಡುಗಡೆ ಮಾಡುವ ಧೈರ್ಯವನ್ನು ಬಿಜೆಪಿ ಏಕೆ ತೋರುತ್ತಿಲ್ಲ ಎಂದು ಸವಾಲು ಹಾಕಿದ ಅವರು, ಕಳೆದ ಆರು ತಿಂಗಳ ಅವಧಿಯಲ್ಲಿ ವರ್ಗಾವಣೆ ದಂಧೆಗಿಳಿದಿರುವ ಸರ್ಕಾರ, ಅಭಿವೃದ್ದಿ ಕಾರ್ಯವನ್ನು ಮರೆತಿದೆ ಎಂದು ಟೀಕಿಸಿದರು.

"ಊರೆಲ್ಲಾ ಕೊಳ್ಳೆ ಹೊಡದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಪೊಲೀಸರು ಹಾಗೂ ಚುನಾವಣಾ ಆಯೋಗ ನಡೆದುಕೊಳ್ಳುತ್ತಿವೆ. ಎಂಟು ಕ್ಷೇತ್ರಗಳಲ್ಲೂ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಸ್ಪಷ್ಟ ಸಾಕ್ಷ್ಯಗಳು ಲಭ್ಯವಿದ್ದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಗಂಭೀರ ಆರೋಪ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವದಂತಿಕೋರ ಸುದ್ದಿ ವಾಹಿನಿ ವಿರುದ್ಧ ಆಚಾರ್ಯ ತರಾಟೆ
ಸ್ಥಾನಮಾನ ಕೇಳೋರು ಪ್ರಚಾರಕ್ಕೆ ಬರ್ತಿಲ್ಲ: ಡಿಕೆಶಿ
ಗಣಿ ವರದಿಯಲ್ಲಿ ಚೆನ್ನಿಗಪ್ಪ ಹೆಸರಿಲ್ಲವೇಕೆ: ಮೊಯ್ಲಿ ಪ್ರಶ್ನೆ
ಸುಳ್ಳು, ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್
'ಲಾಲು ಸಂಬಂಧಿ' ಎಂದ ವಂಚಕಿ 'ಮಾವನ' ಮನೆಗೆ
ನೈಸ್‌ಗೆ ಗೌಡರೇ ವಿಘ್ನ: ಖೇಣಿ ಕಿಡಿಕಿಡಿ