ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಲ್ಲ ಮತಗಟ್ಟೆಗಳೂ ಸೂಕ್ಷ್ಮ: ಚು.ಆಯೋಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಲ ಮತಗಟ್ಟೆಗಳೂ ಸೂಕ್ಷ್ಮ: ಚು.ಆಯೋಗ
ಡಿ.27ರಂದು ಚುನಾವಣೆ ನಡೆಯುತ್ತಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನೂ ಸೂಕ್ಷ್ಮವೆಂದು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ. ಈ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾಲದಲ್ಲಿ ನಡೆದ ಅಕ್ರಮಗಳು, ಹಾಗೂ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು, ಹಣ-ಹೆಂಡ ಹಂಚಿಕೆ ಪ್ರಕರಣಗಳು ಹೆಚ್ಚಾಗಿದ್ದರಿಂದ ಆಯೋಗ ಈ ಘೋಷಣೆ ಹೊರಡಿಸಿದೆ.

ಉಪಚುನಾವಣೆ ನಡೆಯುತ್ತಿರುವ 8 ಕ್ಷೇತ್ರಗಳ ಪೈಕಿ ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠರೊಂದಿಗೆ ಚುನಾವಣಾ ಸಿದ್ಧತೆಗಳ ಬಗ್ಗೆ ಸಭೆ ಹಾಗೂ ಉಳಿದ ಜಿಲ್ಲಾ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಬಾಲಕೃಷ್ಣ, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ವೀಡಿಯೋ ಚಿತ್ರೀಕರಣ
ಎಲ್ಲ ಮತಗಟ್ಟೆಗಳಲ್ಲೂ ಸೂಕ್ಷ್ಮ ವೀಕ್ಷಕರು ಹಾಗೂ ವೀಡಿಯೋ ಗ್ರಾಫರ್‌ಗಳನ್ನು ನಿಯೋಜಿಸಲು ಆಯೋಗ ನಿರ್ಧರಿಸಿದ್ದು, ಹಣ-ಹೆಂಡ ಹಂಚುವುದನ್ನು ತಡೆಯಲು ರಾತ್ರಿವೇಳೆ ಗಸ್ತು ಚುರುಕುಗೊಳಿಸಲು ಆಯೋಗ ಪೊಲೀಸ್ ವರಿಷ್ಠರಿಗೆ ಸೂಚನೆ ನೀಡಿದೆ.

ಪ್ರತೀ ಮತಗಟ್ಟೆಯಲ್ಲೂ ದೂರು ಕೇಂದ್ರವನ್ನು ತೆರೆಯಲಾಗುವುದು ಮತ್ತು ಅಭ್ಯರ್ಥಿಗಳು ಅಥವಾ ಮತದಾರರು ಈ ಕೇಂದ್ರಗಳಲ್ಲಿ ದೂರು ದಾಖಲಿಸಬಹುದಾಗಿದೆ. ಈ ದೂರುಗಳು ಇತ್ಯರ್ಥವಾಗುವವರೆಗೂ ಕ್ಷೇತ್ರದಲ್ಲೇ ಉಳಿಯುವಂತೆ ಚುನಾವಣಾ ವೀಕ್ಷಕರಿಗೆ ಆದೇಶ ನೀಡಲಾಗಿದೆ.

ಡಮ್ಮಿ ಅಭ್ಯರ್ಥಿಗಳ ವಿರುದ್ಧ ಕ್ರಮ
ಚುನಾವಣಾ ಕಣದಲ್ಲಿರುವ ಕೆಲ ಪಕ್ಷೇತರ ಅಭ್ಯರ್ಥಿಗಳು ಡಮ್ಮಿ ಅಭ್ಯರ್ಥಿಗಳ ಪ್ರಚಾರ ನಡೆಸಿದರೆ ಅಂತಹವರ ವಿರುದ್ಧ ಭಾರತೀಯ ಪೀನಲ್ ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೈರಸಿ ತಡೆಗೆ ಗೂಂಡಾ ಕಾಯ್ದೆ ಬಳಕೆಗೆ ಮನವಿ
ಗಣಿ ತನಿಖೆಗೆ ಸದನದ ಒಪ್ಪಿಗೆ ಪಡೆಯಲಾಗಿತ್ತು: ಸಿಎಂ
ಜಾತಿ ಹೆಸರಿನಲ್ಲಿ ಸಿಎಂ ಮತ ಯಾಚನೆ: ಆರೋಪ
ವದಂತಿಕೋರ ಸುದ್ದಿ ವಾಹಿನಿ ವಿರುದ್ಧ ಆಚಾರ್ಯ ತರಾಟೆ
ಸ್ಥಾನಮಾನ ಕೇಳೋರು ಪ್ರಚಾರಕ್ಕೆ ಬರ್ತಿಲ್ಲ: ಡಿಕೆಶಿ
ಗಣಿ ವರದಿಯಲ್ಲಿ ಚೆನ್ನಿಗಪ್ಪ ಹೆಸರಿಲ್ಲವೇಕೆ: ಮೊಯ್ಲಿ ಪ್ರಶ್ನೆ