ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ
ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ ವಾಹನಗಳಲ್ಲೇ ಬಿಜೆಪಿ ಪರ ಹಣ ಮತ್ತು ಹೆಂಡ ಹಂಚುವ ಕೆಲಸ ಮಧುಗಿರಿ ಮತ್ತು ತುರುವೇಕೆರೆಯಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.

ಅಧಿಕಾರ ದುರುಪಯೋಗ ತಾರಕ್ಕೇರಿದ್ದು ಈ ಕಾರಣಕ್ಕೂ ಯಡಿಯೂರಪ್ಪ ಅವರಿಗೆ ಮತ್ತೊಂದು ಡಾಕ್ಟರೇಟ್ ನೀಡಬಹುದು ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿರುಗೇಟು ನೀಡಿದ್ದಾರೆ.

ಚುನಾವಣೆ ನಡೆಯುವ ಹಲವು ಕ್ಷೇತ್ರಗಳಲ್ಲಿ ಮಂತ್ರಿಗಳೇ ಬೀಡುಬಿಟ್ಟಿದ್ದು, ಅವರ ನೇತೃತ್ವದಲ್ಲೇ ಎಲ್ಲ ಆಕ್ರಮಗಳೂ ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಮದ್ಯ ಕಳುಹಿಸಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು, ಕೊರಟಗೆರೆ ಸಮೀಪ ಸಾವಿರಕ್ಕೂ ಅಧಿಕ ಅಧಿಕಾರಿಗಳಿಗೆ ಬಾಡೂಟ ಹಾಕಿಸಿ, ಅವರನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ಕೆಲಸ ಮಾಡಿದ್ದಾರೆ. ಇದನ್ನೂ ಆಯೋಗ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಗೆದ್ದರೂ ಸೋತರೂ ಬದಲಿ ಸರ್ಕಾರವಿಲ್ಲ: ದೇವೇಗೌಡ
ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ: ಬಂಗಾರಪ್ಪ
ಮಾಧ್ಯಮಗಳ ವಿರುದ್ಧ ಪ್ರಕರಣ ವಾಪಸ್: ಶ್ರೀರಾಮುಲು
ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಸಿಎಂ
ಬಾಯಿ ಮುಚ್ಕೊಂಡ್ ಕೆಲ್ಸ ಮಾಡಿ: ಖೇಣಿಗೆ ಗದರಿದ ಕೃಷ್ಣ
ಅನಂತಮೂರ್ತಿ ಸೇರಿದಂತೆ ಐವರಿಗೆ ನಾಡೋಜ ಪ್ರಶಸ್ತಿ