ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ
ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಶೇ.90ರಷ್ಟು ಭರವಸೆಗಳನ್ನು ಈಡೇರಿಸಿದೆ. ಈ ಮೂಲಕ ಅತ್ಯಂತ ತ್ವರಿತವಾಗಿ ಪ್ರಣಾಳಿಕೆ ಜಾರಿಗೆ ತಂದ ಹೆಗ್ಗಳಿಗೆ ಬಿಜೆಪಿಯದ್ದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆಕರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ರಾಜ್ಯದ ಜನತೆಗೆ ಸ್ಥಿರ ಸರ್ಕಾರ ಬೇಕಾಗಿದ್ದು ಅದಕ್ಕಾಗಿ ಅವರು ಬಿಜೆಪಿಯತ್ತ ವಿಶ್ವಾಸವಿರಿಸಿದ್ದಾರೆ. ಈ ಕಾರಣದಿಂದ ಉಪಚುನಾವಣೆಯಲ್ಲಿ ಬಿಜೆಪಿಯು ಎಲ್ಲ ಕ್ಷೇತ್ರಗಳಲ್ಲೂ ಜಯಗಳಿಸಲಿದ್ದು, ಫಲಿತಾಂಶದ ನಂತರ ರಾಜಕೀಯ ಧ್ರುವೀಕರಣವಾಗಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೋಲಿನ ಭೀತಿಯಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ ಎಂದ ಅವರು, ವಿರೋಧ ಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಜನತೆಗೆ ಗೊತ್ತಿದೆ. ನನ್ನನ್ನು ಜಾತಿ ರಾಜಕಾರಣ ಮಾಡುತ್ತಿದ್ದಾನೆ ಎಂದು ವಿರೋಧಿಗಳು ಆರೋಪಿಸಿದ್ದು, ಅಂತಹ ಕೀಳು ರಾಜಕಾರಣಕ್ಕೆ ನಾನು ಎಂದೂ ಮುಂದಾಗುವುದಿಲ್ಲ ಎಂದು ಹೇಳಿದರು.

ಲೋಕಾಯುಕ್ತ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳಲ್ಲಿ ವಿರೋಧ ಪಕ್ಷಗಳಿಗೆ ಗೌರವವಿಲ್ಲ. ಜೊತೆಗೆ ನೈಸ್ ವಿವಾದವನ್ನು ಹುಟ್ಟುಹಾಕಿದ ಜೆಡಿಎಸ್-ಕಾಂಗ್ರೆಸ್ ಅದನ್ನು ಬಿಜೆಪಿ ಕೊರಳಿಗೆ ಕಟ್ಟುವ ಪ್ರಯತ್ನ ಮಾಡುತ್ತಿವೆ. ಈ ಎಲ್ಲವನ್ನೂ ಜನತೆ ಅರ್ಥಮಾಡಿಕೊಂಡು ಮತಚಲಾಯಿಸುವರು ಎಂಬ ವಿಶ್ವಾಸ ನನಗಿದೆ. ಎಲ್ಲದಕ್ಕೂ ಬೆಳಗಾವಿಯಲ್ಲಿ ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದರು.

ನಿನ್ನೆಯಷ್ಟೇ ಮತ್ತೆ ಉಪಚುನಾವಣೆ ನಡೆಯಬಹುದು ಎಂದು ಹೇಳಿದ್ದ ಮುಖ್ಯಮಂತ್ರಿಗಳು "ಮತ್ತೆ ಆಪರೇಷನ್ ಕಮಲ ನಡೆಸುವ ಸ್ಥಿತಿಯನ್ನು ರಾಜ್ಯದ ಜನತೆ ತಂದೊಡ್ಡುವುದಿಲ್ಲ. ಆದ್ದರಿಂದ ಮತ್ತೆ ಚುನಾವಣೆ ನಡೆಯುವಂತಹ ಪರಿಸ್ಥಿತಿ ಬರುವುದಿಲ್ಲ ಎಂಬ ಆಶಾವಾದ ನನಗಿದೆ" ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ
ಬಿಜೆಪಿ ಗೆದ್ದರೂ ಸೋತರೂ ಬದಲಿ ಸರ್ಕಾರವಿಲ್ಲ: ದೇವೇಗೌಡ
ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ: ಬಂಗಾರಪ್ಪ
ಮಾಧ್ಯಮಗಳ ವಿರುದ್ಧ ಪ್ರಕರಣ ವಾಪಸ್: ಶ್ರೀರಾಮುಲು
ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಸಿಎಂ
ಬಾಯಿ ಮುಚ್ಕೊಂಡ್ ಕೆಲ್ಸ ಮಾಡಿ: ಖೇಣಿಗೆ ಗದರಿದ ಕೃಷ್ಣ