ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಧುಗಿರಿ ಗೆಲುವಿಗೆ ಬಿಜೆಪಿ ವಾಮಮಾರ್ಗ: ರೇವಣ್ಣ ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧುಗಿರಿ ಗೆಲುವಿಗೆ ಬಿಜೆಪಿ ವಾಮಮಾರ್ಗ: ರೇವಣ್ಣ ಆರೋಪ
ಅನಿತಾ ಕುಮಾರಸ್ವಾಮಿಯವರು ಸ್ಪರ್ಧಿಸಿರುವ ಮಧುಗಿರಿ ಕ್ಷೇತ್ರದಲ್ಲಿ ಮತಯಂತ್ರ ಜೋಡಣೆಯಲ್ಲಿ ಗೊಂದಲ ಮೂಡಿಸಲು ಬಿಜೆಪಿ ಪ್ರಯತ್ನಪಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಚುನಾವಣೆ ಅಧಿಕಾರಿಗಳೂ ಈ ಕೃತ್ಯದಲ್ಲಿ ಪಾಲ್ಗೊಳ್ಳುವ ಶಂಕೆಯಿದ್ದು, ಮತಯಂತ್ರದ ಕ್ರಮಸಂಖ್ಯೆಯನ್ನೂ ಅದಲು ಬದಲು ಮಾಡುವ ಮೂಲಕ ಮತ್ತಷ್ಟು ಗೊಂದಲ ನಿರ್ಮಿಸಲು ಬಿಜೆಪಿ ಪ್ರಯತ್ನ ಪಡುತ್ತಿದೆ ಎಂದು ದೂರಿದ್ದಾರೆ.

ಚುನಾವಣಾ ಆಯೋಗ ಜೆಡಿಎಸ್ ಅಭ್ಯರ್ಥಿಗೆ ಮೊದಲ ಕ್ರಮಸಂಖ್ಯೆ ನೀಡಿದೆ. ಆದರೆ ಮತಯಂತ್ರಗಳನ್ನು ಜೋಡಿಸುವ ಕ್ರಮದಲ್ಲಿ ವ್ಯತ್ಯಾಸ ಮಾಡಲು ಬಿಜೆಪಿ ಪ್ರಯತ್ನಪಡುತ್ತಿದೆ ಎಂದರಲ್ಲದೆ, ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿ, ಇಂತಹ ಕ್ರಮಗಳಿಗೆ ಮುಂದಾಗಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ
ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ
ಬಿಜೆಪಿ ಗೆದ್ದರೂ ಸೋತರೂ ಬದಲಿ ಸರ್ಕಾರವಿಲ್ಲ: ದೇವೇಗೌಡ
ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ: ಬಂಗಾರಪ್ಪ
ಮಾಧ್ಯಮಗಳ ವಿರುದ್ಧ ಪ್ರಕರಣ ವಾಪಸ್: ಶ್ರೀರಾಮುಲು
ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಸಿಎಂ