ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್ - ಜೆಡಿಎಸ್ ನಡುವೆ ಒಪ್ಪಂದ: ಅನಂತ್ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ - ಜೆಡಿಎಸ್ ನಡುವೆ ಒಪ್ಪಂದ: ಅನಂತ್ ಕುಮಾರ್
ಪ್ರಸ್ತುತ ನಡೆಯುತ್ತಿರುವ ಎಂಟು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಆರೋಪಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಒಳ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಮತದಾರರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ನಡೆಸುವವರಿಲ್ಲ. ಕೇವಲ ಪದಾಧಿಕಾರಿಗಳು ಮಾತ್ರ ಇದ್ದಾರೆ. ಸಿದ್ದರಾಮಯ್ಯ ಮತ್ತು ಜಾಲಪ್ಪ, ಕೌಜಲಗಿ ತಟಸ್ಥ ನಿಲುವು ತಾಳಿರುವುದು ಕಾಂಗ್ರೆಸ್ ಪಕ್ಷದ ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರದ ಕುರಿತು ಮಾತನಾಡಿದ ಅವರು, ಪಾಕ್ ವಿರುದ್ಧ ಮೃಧು ಧೋರಣೆ ತಳೆಯುತ್ತಿರುವ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಸಮಯೋಚಿತ ಕಠಿಣ ನಿರ್ಧಾರ ಕೈಗೊಂಡರೆ ನಮ್ಮ ಬೆಂಬಲವಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆ: 'ಮಿನಿ ಸಮರ'ಕ್ಕೆ ಕ್ಷಣಗಣನೆ
ಮಧುಗಿರಿ ಗೆಲುವಿಗೆ ಬಿಜೆಪಿ ವಾಮಮಾರ್ಗ: ರೇವಣ್ಣ ಆರೋಪ
ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ
ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ
ಬಿಜೆಪಿ ಗೆದ್ದರೂ ಸೋತರೂ ಬದಲಿ ಸರ್ಕಾರವಿಲ್ಲ: ದೇವೇಗೌಡ
ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ: ಬಂಗಾರಪ್ಪ