ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಹಣಕ್ಕಾಗಿ ವೋಟು' ಮಾರಾಟ: ಕರ್ನಾಟಕಕ್ಕೆ ಅಗ್ರಸ್ಥಾನ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹಣಕ್ಕಾಗಿ ವೋಟು' ಮಾರಾಟ: ಕರ್ನಾಟಕಕ್ಕೆ ಅಗ್ರಸ್ಥಾನ !
ಪ್ರಜ್ಞಾವಂತರ ರಾಜ್ಯ, ಸಾಕ್ಷರರ ರಾಜ್ಯ ಎಂಬೆಲ್ಲಾ ಖ್ಯಾತಿಗೆ ಭಾಜನವಾದ ಕರ್ನಾಟಕ, ಚುನಾವಣೆಯ ಸಂದರ್ಭದಲ್ಲಿ 'ಹಣಕ್ಕಾಗಿ ತಮ್ಮ ವೋಟ'ನ್ನು ಮಾರಿಕೊಳ್ಳುವ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನವನ್ನು ಪಡೆದುಕೊಂಡಿರುವುದಾಗಿ ಎನ್‌ಜಿಓ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಳಿಸಿದೆ.

ದೆಹಲಿ ಮೂಲದ ಎನ್‌ಜಿಓ ಸಂಸ್ಥೆಯೊಂದು 'ಅಲಾರಾಮಿಂಗ್ ಟ್ರೆಂಡ್ ಆಫ್ ಪರ್ಚೆಸಿಂಗ್ ವೋಟರ್ಸ್' ಎಂಬ ತಲೆಬರಹದಡಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಕ್ಷರರು ಎಂಬ ಹೆಸರಿಗೆ ಕಳಂಕ ತಂದಿದೆ. ಮತದಾರರು ಪಕ್ಷಗಳು ನೀಡುವ ಹಣಕ್ಕಾಗಿ ವೋಟನ್ನು ಮಾರಿಕೊಳ್ಳುತ್ತಿರುವುದಾಗಿ ವರದಿ ತಿಳಿಸಿದೆ.

2008ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆಯ ಚುನಾವಣೆಯ ಬಳಿಕ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಆ ನಿಟ್ಟಿನಲ್ಲಿ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಣ ಹೊಳೆಯನ್ನು ಹರಿಸುವ ಮೂಲಕ ಮತದಾರರನ ವೋಟನ್ನು ಖರೀದಿಸಿ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುವಂತಾಗಿತ್ತು ಎಂದು ಸಮೀಕ್ಷಾ ವರದಿ ಹೇಳಿದೆ.

ಆ ನಿಟ್ಟಿನಲ್ಲಿ ಸಿಎಂಎಸ್ ತಮಿಳುನಾಡು, ಮಧ್ಯಪ್ರದೇಶ, ಆಂಧ್ರಪ್ರದೇಶ, ಬಿಹಾರ ಹಾಗೂ ಕರ್ನಾಟಕಗಳಲ್ಲಿ ಹಣಕ್ಕಾಗಿ ವೋಟು ಎಂಬ ಹೆಸರಿನಲ್ಲಿ ಅಧ್ಯಯನ ನಡೆಸಿತ್ತು. ಆದರೆ 2008ರ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಹಣಕೊಟ್ಟು ಮತವನ್ನು ಖರೀದಿಸುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿರುವುದಾಗಿ ಹೇಳಿರುವ ಸಮೀಕ್ಷಾ ವರದಿ, ಎಡಪಕ್ಷಗಳು ಆಡಳಿತ ಹೊಂದಿರುವ ಕೇರಳ, ಪಶ್ಚಿಮಬಂಗಾಳ ಹಾಗೂ ತ್ರಿಪುರಾಗಳಲ್ಲಿ ಈ ಅಂಕಿ-ಅಂಶ (2008ರ ಮೇ ಚುನಾವಣೆಯಲ್ಲಿ) ಬಹಳಷ್ಟು ಕಡಿಮೆ ಇರುವುದಾಗಿಯೂ ಹೇಳಿದೆ.

ಸಾಕ್ಷರರ ನಾಡು ಎಂದೇ ಹೆಗ್ಗಳಿಕೆ ಹೊಂದಿರುವ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿಯೇ ಹಣಕ್ಕಾಗಿ ಮತ ಮಾರಿಕೊಳ್ಳುವ ಪರಿಪಾಠ ಹೆಚ್ಚಾಗಿದೆ ಎಂದು ಸಮೀಕ್ಷೆ ದೂರಿದೆ. ಅದರಲ್ಲೂ ತುಂಬಾ ಆಸಕ್ತಿದಾಯಕವಾಗಿರುವುದೇನೆಂದರೆ, ಪ್ರಸ್ತುತವಾಗಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರ ಹಣಕ್ಕಾಗಿ ಮತ ಖರೀದಿಸುವ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವುದಾಗಿ ಸಿಎಂಎಸ್ ಅಂಕಿ-ಅಂಶ ವಿವರಿಸಿದೆ.

ಹಣಕ್ಕಾಗಿ ವೋಟು ಮಾರಿಕೊಳ್ಳುವ ಅಥವಾ ಹಣದಿಂದ ವೋಟು ಖರೀದಿಸುವ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.57ರಷ್ಟಿದ್ದರೆ ಅರಭಾವಿ ಕ್ಷೇತ್ರದಲ್ಲಿ ಶೇ.16ದಷ್ಟು ಮತದಾರರು ಅಭಿಪ್ರಾಯ ಸೂಚಿಸಿದ್ದಾರೆ.

200ರ ಮೇ ತಿಂಗಳಿನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ ಉಪಚುನಾವಣೆಯಲ್ಲಿ ಹಣದಿಂದ ವೋಟು ಖರೀದಿಸುವಲ್ಲಿ ಉಳಿದೆಲ್ಲಾ ಪಕ್ಷಗಳನ್ನು ಜೆಡಿಎಸ್ ಮೀರಿಸಿರುವುದಾಗಿ ಸಿಎಂಎಸ್ ವರದಿ ಬಹಿರಂಗಗೊಳಿಸಿದೆ. ಇದೀಗ ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರು ಬಿಜೆಪಿ ಟಿಕೆಟ್‌ನಿಂದ ಮಧುಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿಯೂ ಜೆಡಿಎಸ್ ಕಾಂಗ್ರೆಸ್ ಮತ್ತು ಬಿಜೆಪಿಯ ಹಾದಿಯನ್ನೇ ತುಳಿದಿರುವುದಾಗಿ ಹೇಳಿದೆ.

ವೋಟಿಗಾಗಿ ಹಣ ನೀಡುವಲ್ಲಿ ಅರಭಾವಿ ಹಾಗೂ ದೇವದುರ್ಗ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಂತರದ ಸ್ಥಾನದಲ್ಲಿದೆ. ಕಳೆದ ಬಾರಿ ತುರುವೇಕೆರೆ ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದರೆ, ಮಧುಗಿರಿ ಜೆಡಿಎಸ್ ತೆಕ್ಕೆಯಲ್ಲಿತ್ತು.

ಆದರೆ ಈ ಬಾರಿ ತುರುವೇಕೆರೆಯಲ್ಲಿ ಎಂ.ಡಿ.ಲಕ್ಷ್ಳೀನಾರಾಯಣ್ ಮತ್ತೆ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದರೆ (ಕಳೆದ ಬಾರಿ ಕಾಂಗ್ರೆಸ್‌ನಿಂದ ನಟ ಜಗ್ಗೇಶ್ ಗೆಲುವು ಸಾಧಿಸಿದ್ದರು), ಮಧುಗಿರಿಯಲ್ಲಿ ಮಾಜಿ ಸಚಿವ ಚೆನ್ನಿಗಪ್ಪ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಇದೀಗ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ದೇವೇಗೌಡರ ಸೊಸೆ, ಕುಮಾರಸ್ವಾಮಿ ಪತ್ನಿ ಅನಿತಾ ಅವರು ಅಖಾಡದಲ್ಲಿದ್ದು, ಮತದಾರರನ ವೋಟ್ ಅನ್ನು ಹಣ-ಹೆಂಡದ ಮೂಲಕ ಖರೀದಿಸುವ ಹಾಗೂ ಪ್ರಜ್ಞಾವಂತ ಮತದಾರರು ತಮ್ಮ ಮತವನ್ನು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಮಾರಿಕೊಳ್ಳುವ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಮೀಕ್ಷೆ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ - ಜೆಡಿಎಸ್ ನಡುವೆ ಒಪ್ಪಂದ: ಅನಂತ್ ಕುಮಾರ್
ಚುನಾವಣೆ: 'ಮಿನಿ ಸಮರ'ಕ್ಕೆ ಕ್ಷಣಗಣನೆ
ಮಧುಗಿರಿ ಗೆಲುವಿಗೆ ಬಿಜೆಪಿ ವಾಮಮಾರ್ಗ: ರೇವಣ್ಣ ಆರೋಪ
ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ
ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ
ಬಿಜೆಪಿ ಗೆದ್ದರೂ ಸೋತರೂ ಬದಲಿ ಸರ್ಕಾರವಿಲ್ಲ: ದೇವೇಗೌಡ