ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸರ್ಕಾರಕ್ಕೆ ನಾಯ್ಡುರಿಂದ 10ಸಾವಿರ ಕೋಟಿ ವಂಚನೆ: ಜೆಡಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ಕಾರಕ್ಕೆ ನಾಯ್ಡುರಿಂದ 10ಸಾವಿರ ಕೋಟಿ ವಂಚನೆ: ಜೆಡಿಎಸ್
ರಾಜ್ಯದಲ್ಲಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರು ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಸರ್ಕಾರಕ್ಕೆ 10 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೇವಣ್ಣ, ಕರ್ನಾಟಕ ಕೈಗಾರಿಕಾ ಅಭಿವೃದ್ದಿ ನಿಗಮದ-ಕೆಐಎಡಿಬಿ- ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರವಾಗಿದ್ದು, ಅದರ ಪ್ರತಿಯೊಂದು ದಾಖಲೆಯೂ ತಮ್ಮ ಬಳಿ ಇದೆ ಎಂದು ರೇವಣ್ಣ ಹೇಳಿದರು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ ಎಂಬುದು ರೇವಣ್ಣ ಅವರ ಆರೋಪ. ಸಚಿವರೊಂದಿಗೆ ಅವರ ಪುತ್ರ ಜಗದೀಶ್ ಅವರೂ ಈ ಹಗರಣದಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೆ ಎಂದಿರುವ ರೇವಣ್ಣ, ಎಲ್ಲ ಅವ್ಯವಹಾರಗಳು 2006-08ರ ಅವಧಿಯಲ್ಲಿ ನಡೆದಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ. ಹಾಗೆ ಮಾಡುವಾಗ ನೇರವಾಗಿ ಜಮೀನನ್ನು ವಶಪಡಿಸಿಕೊಂಡು ಕೆಐಎಡಿಬಿ ನಿಯಮಾವಳಿಗಳಿಗೆ ವಿರುದ್ಧವಾಗಿ ಹಣದಾಸೆಗೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ. ಇದನ್ನು ಅವರು ಸಂಪುಟ ಸಭೆಯ ಗಮನಕ್ಕೂ ತಂದಿಲ್ಲ ಎಂದು ಆರೋಪಿಸಿದ್ದಾರೆ.

ನಿಯಮಾವಳಿ ಪ್ರಕಾರ ಡಿ ನೋಟಿಫಿಕೇಷನ್ ಆದ ನಂತರ ಜಮೀನನ್ನು ಪರಭಾರೆ ಮಾಡಲು ಅವಕಾಶವಿದೆ. ಆದರೆ ಜಮೀನನ್ನು ಹಾಗೆಯೇ ಪರಭಾರೆ ಮಾಡಿರುವುದನ್ನು ಗಮನಿಸಿದರೆ ಇಲ್ಲಿ ಕೋಟಿ ಕೋಟಿ ಹಣ ಕೈಬದಲಾಗಿರುವುದು ಸ್ಪಷ್ಟವಾಗಿದೆ ಎಂದರು.

ಹಗರಣದಲ್ಲಿ ನಿಮ್ಮ ಪಾತ್ರ ಏನೂ ಇಲ್ಲವೇ? ನಿಮ್ಮ ಸಹೋದರ ಕುಮಾರಸ್ವಾಮಿಯವರೇ ಆಗ ಸಚಿವರಾಗಿದ್ದರಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದರಿಂದ ತಪ್ಪು ಯಾರದ್ದೇ ಆದರೂ ಹೊರಬರುತ್ತದೆ ಎಂದು ರೇವಣ್ಣ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಹಣಕ್ಕಾಗಿ ವೋಟು' ಮಾರಾಟ: ಕರ್ನಾಟಕಕ್ಕೆ ಅಗ್ರಸ್ಥಾನ !
ಕಾಂಗ್ರೆಸ್ - ಜೆಡಿಎಸ್ ನಡುವೆ ಒಪ್ಪಂದ: ಅನಂತ್ ಕುಮಾರ್
ಚುನಾವಣೆ: 'ಮಿನಿ ಸಮರ'ಕ್ಕೆ ಕ್ಷಣಗಣನೆ
ಮಧುಗಿರಿ ಗೆಲುವಿಗೆ ಬಿಜೆಪಿ ವಾಮಮಾರ್ಗ: ರೇವಣ್ಣ ಆರೋಪ
ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ
ಮಧುಗಿರಿಯಲ್ಲಿ ಹಣ-ಹೆಂಡದ ಹೊಳೆ: ರೇವಣ್ಣ