ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅವ್ಯವಹಾರ ಆರೋಪ ನಿರಾಧಾರ: ಸಚಿವ ಕಟ್ಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವ್ಯವಹಾರ ಆರೋಪ ನಿರಾಧಾರ: ಸಚಿವ ಕಟ್ಟಾ
ಕೆಐಎಡಿಬಿ ಭೂಮಿ ಹಂಚಿಕೆಯಲ್ಲಿ ಮಾಜಿ ಸಚಿವ ರೇವಣ್ಣ ಮಾಡಿರುವ ಆರೋಪವನ್ನು ಬಲವಾಗಿ ನಿರಾಕರಿಸಿರುವ ಅಬಕಾರಿ ಹಾಗೂ ಐಟಿ-ಬಿಟಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ತಾವು ಕೈಗಾರಿಕಾ ಸಚಿವರಾಗಿದ್ದಾಗ ಭೂ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಆಧಾರರಹಿತ ಎಂದು ತಿಳಿಸಿದ್ದಾರೆ.

ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗುವ ಮುನ್ನವೇ ಜಮೀನು ವಿತರಣೆ ಮಾಡಲಾಗಿದೆ ಎಂದು ಹೇಳಿರುವುದು ವಾಸ್ತವಕ್ಕೆ ದೂರವಾದ ವಿಚಾರ. ರಾಜ್ಯ ಏಕಗವಾಕ್ಷಿ ಯೋಜನೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದಿಮೆದಾರರು ಸಲ್ಲಿಸುವ ಯೋಜನೆಗಳಿಗೆ ಮಾತ್ರ ಅನುಮೋದನೆ ನೀಡಲಾಗುವುದು ಎಂದರು.

ಭೂ ವಿತರಣೆಯನ್ನು ಕೈಗಾರಿಕಾ ಅಭಿವೃದ್ದಿ ಮಂಡಳಿಯ ಸಂಪೂರ್ಣ ಪ್ರಕ್ರಿಯೆ ಮುಗಿದ ನಂತರ ಕೈಗೊಳ್ಳಲಾಗುವುದು. ಈಗಾಗಲೇ ಭೂಮಿ ಪಡೆದು ಕೈಗಾರಿಕೆಗಳನ್ನು ಆರಂಭ ಮಾಡದ ಜಮೀನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಗೆ ಹೊಸ ಸರ್ಕಾರ ಚಾಲನೆ ನೀಡಿದೆ. ಆದ ಕಾರಣ ಉದ್ದಿಮೆ ಪ್ರಾರಂಭ ಮಾಡದವರು ಭೂಮಿಯನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಬಂಡೇಕೋಡಿಹಳ್ಳಿಯಲ್ಲಿ ಇನ್ಟೆಂಕ್ ಸಂಸ್ಥೆಗೆ ಭೂಮಿ ನೀಡಲಾಗಿದೆ ಎನ್ನುವ ಆರೋಪ ಮಾಡುತ್ತಾ ಅನಗತ್ಯವಾಗಿ ನನ್ನ ಮಗನ ಹೆಸರನ್ನು ಜೋಡಿಸಿರುವುದು ನೋವಿನ ಸಂಗತಿ. 325 ಎಕರೆ ಜಮೀನು ಮಂಜೂರು ಮಾಡುವ ಅಧಿಕಾರ ಇರುವುದು ಉನ್ನತಾಧಿಕಾರ ಸಮಿತಿಗೆ ಮಾತ್ರ. ಅದರ ಅಧ್ಯಕ್ಷರು ರಾಜ್ಯದ ಮುಖ್ಯಮಂತ್ರಿಗಳು. ಈ ಅವಧಿಯಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿದ್ದರು. ಆದ್ದರಿಂದ ರೇವಣ್ಣ, ತಮ್ಮ ಸಹೋದರರನ್ನೇ ಪ್ರಶ್ನಿಸಿದರೆ ಮಾಹಿತಿ ಸಿಗಬಹುದು ಎಂದು ತಿರುಗೇಟು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರಕ್ಕೆ ನಾಯ್ಡುರಿಂದ 10ಸಾವಿರ ಕೋಟಿ ವಂಚನೆ: ಜೆಡಿಎಸ್
'ಹಣಕ್ಕಾಗಿ ವೋಟು' ಮಾರಾಟ: ಕರ್ನಾಟಕಕ್ಕೆ ಅಗ್ರಸ್ಥಾನ !
ಕಾಂಗ್ರೆಸ್ - ಜೆಡಿಎಸ್ ನಡುವೆ ಒಪ್ಪಂದ: ಅನಂತ್ ಕುಮಾರ್
ಚುನಾವಣೆ: 'ಮಿನಿ ಸಮರ'ಕ್ಕೆ ಕ್ಷಣಗಣನೆ
ಮಧುಗಿರಿ ಗೆಲುವಿಗೆ ಬಿಜೆಪಿ ವಾಮಮಾರ್ಗ: ರೇವಣ್ಣ ಆರೋಪ
ಶೇ.90ರಷ್ಟು ಭರವಸೆ ಈಡೇರಿಕೆ: ಯಡಿಯೂರಪ್ಪ