ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು: ಸಿಎಂ
ಅತಂತ್ರ ಸರಕಾರ ರಚನೆಯಾದ ವೇಳೆ ಸಹಾಯಕ್ಕೆ ಬಂದ ಐವರು ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಉಪಚುನಾವಣೆಯಲ್ಲಿ ಎಲ್ಲ 8 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದ್ದು, ಸರ್ಕಾರದ ಸ್ಥಿರತೆಗೆ ಮುಂದಿನ ದಿನಗಳಲ್ಲಿ ಯಾವ ಭಂಗವೂ ಇಲ್ಲ. ಆದರೆ, ಖಚಿತ ಬಹುಮತ ಸಿಕ್ಕಿತೆಂದು ಪಕ್ಷೇತರ ಸಚಿವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಎಲ್ಲ ಐವರು ಸಚಿವರೂ ತಮ್ಮೊಂದಿಗೆ ಮುಂದಿನ ನಾಲ್ಕೂವರೆ ವರ್ಷಗಳ ಕಾಲ ಇರಲಿದ್ದಾರೆ. ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಮರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಎಂಟು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೂ, ಪಕ್ಷೇತರರನ್ನು ಕೈ ಬಿಡಲಾಗುವುದು ಎಂದೇ ಮಾಧ್ಯಮಗಳು ವರದಿ ಮಾಡುತ್ತಿವೆ. ಏನೇ ಆಗಲಿ ಪಕ್ಷೇತರರನ್ನು ಕೈಬಿಡುವಷ್ಟು ನಿಷ್ಠುರ ವ್ಯಕ್ತಿ ತಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವದುರ್ಗದಲ್ಲಿ 20 ಲಕ್ಷ ರೂ.ವಶಕ್ಕೆ
ಹಿಂದುಳಿದ ನಿಗಮಗಳ ವಿಲೀನ ಇಲ್ಲ: ಸರ್ಕಾರ ಸ್ಪಷ್ಟನೆ
ಅವ್ಯವಹಾರ ಆರೋಪ ನಿರಾಧಾರ: ಸಚಿವ ಕಟ್ಟಾ
ಸರ್ಕಾರಕ್ಕೆ ನಾಯ್ಡುರಿಂದ 10ಸಾವಿರ ಕೋಟಿ ವಂಚನೆ: ಜೆಡಿಎಸ್
'ಹಣಕ್ಕಾಗಿ ವೋಟು' ಮಾರಾಟ: ಕರ್ನಾಟಕಕ್ಕೆ ಅಗ್ರಸ್ಥಾನ !
ಕಾಂಗ್ರೆಸ್ - ಜೆಡಿಎಸ್ ನಡುವೆ ಒಪ್ಪಂದ: ಅನಂತ್ ಕುಮಾರ್