ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಣ ಹಂಚಿಕೆ: ಚೆನ್ನಿಗಪ್ಪ ಮಗ ಪರಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣ ಹಂಚಿಕೆ: ಚೆನ್ನಿಗಪ್ಪ ಮಗ ಪರಾರಿ
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ವೇಳೆ ಚುನಾವಣಾ ಆಯೋಗ ದಾಳಿ ನಡೆಸಿದ್ದರಿಂದ ಬಿಜೆಪಿ ಅಭ್ಯರ್ಥಿ ಚೆನ್ನಿಗಪ್ಪ ಅವರ ಪುತ್ರ ವೇಣುಗೋಪಾಲ್ ಪರಾರಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.

ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿಯ ಕತ್ತಿಗಾನಗಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಮತಹಾಕುವಂತೆ ಹಣ ಹಂಚುತ್ತಿದ್ದ ವೇಳೆ ದಾಳಿ ನಡೆಸಿದ ಆಯೋಗ ಮೂವರನ್ನು ಬಂಧಿಸಿದ್ದು, ಒಂದು ಕ್ವಾಲಿಸ್ ವಾಹನ ಮತ್ತು 2.64 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದೆ.

ಬಾಲಕೃಷ್ಣ, ಬಾಬು ಮತ್ತು ಮಂಜುನಾಥ್ ಬಂಧಿತರಾಗಿದ್ದು, ಚೆನ್ನಿಗಪ್ಪ ಅವರ ಪುತ್ರ ವೇಣುಗೋಪಾಲ್ ಈ ಸಮಯದಲ್ಲಿ ಅಲ್ಲಿದ್ದರು. ಆದರೆ ಪೊಲೀಸ್ ದಾಳಿಯ ಕುರಿತು ಸುಳಿವು ಅರಿತ ಅವರು ಕೂಡಲೆ ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎಂದು ಗೋಪಾಲ್ ಹೇಳಿದ್ದಾರೆ.

ಚುನಾವಣಾ ಅಧಿಕಾರಿಗಳ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರವೇ ರಂಗಾಯಣಕ್ಕೆ ಮಹಿಳಾ ನಿರ್ದೇಶಕರ ನೇಮಕ: ಶೋಭಾ
ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು: ಸಿಎಂ
ದೇವದುರ್ಗದಲ್ಲಿ 20 ಲಕ್ಷ ರೂ.ವಶಕ್ಕೆ
ಹಿಂದುಳಿದ ನಿಗಮಗಳ ವಿಲೀನ ಇಲ್ಲ: ಸರ್ಕಾರ ಸ್ಪಷ್ಟನೆ
ಅವ್ಯವಹಾರ ಆರೋಪ ನಿರಾಧಾರ: ಸಚಿವ ಕಟ್ಟಾ
ಸರ್ಕಾರಕ್ಕೆ ನಾಯ್ಡುರಿಂದ 10ಸಾವಿರ ಕೋಟಿ ವಂಚನೆ: ಜೆಡಿಎಸ್