ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ
ಬೆಂಗಳೂರಿನ ಡೆಕ್ಕನ್ ವಿಜುವಲ್ಸ್ ಸಂಸ್ಥೆಯು ಉಡುಪಿಯ ಪೇಜಾವರ ಮಠದ ಶ್ರೀಗಳಾದ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರನ್ನು ಕುರಿತು ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದು ಈ ಕಾರ್ಯಕ್ರಮವು ದೂರದರ್ಶನದಲ್ಲಿ ಪ್ರತಿ ಶನಿವಾರ ಪ್ರಸಾರವಾಗಲಿದೆ.

ಜನವರಿ 3ರ ಶನಿವಾರದಿಂದ ಪ್ರಸಾರಕ್ಕೆ ಚಾಲನೆ ದೊರೆಯಲಿದ್ದು ದೂರದರ್ಶನದಲ್ಲಿ ಬೆಳಗ್ಗೆ 8.30ಕ್ಕೆ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ವಾರದಲ್ಲಿ ಶನಿವಾರದಂದು ಮಾತ್ರ ಕಾರ್ಯಕ್ರಮ ಪ್ರಸಾರವಾಗಲಿದ್ದು ಒಟ್ಟು 8 ಎಪಿಸೋಡ್‌‌ಗಳನ್ನು ಒಳಗೊಂಡಿದೆ ಎಂದು ಡೆಕ್ಕನ್ ವಿಜುವಲ್ಸ್ ನಿರ್ಮಾಪಕ ಜಿ.ಗುರುಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಪೇಜಾವರಶ್ರೀಗಳು ತಮ್ಮ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ ಶ್ರೀನ್ಮಠದ 33ನೇ ಯತಿಗಳಾಗಿ ನೇಮಕವಾದಂದಿನಿಂದ ಇಂದಿನವರೆಗೆ ಹಲವು ಸಾಧನೆಗಳನ್ನು ಮಾಡಿದ್ದಾರೆ. ಇವೆಲ್ಲವುಗಳ ಬೆಳಕು ಚೆಲ್ಲುವಂತೆ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ. ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಉತ್ತರ ಭಾರತದಲ್ಲೂ ಯತಿಗಳು ಕೈಗೊಂಡಿರುವ ಕಾರ್ಯಗಳ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿ ಮಾಹಿತಿ ಇದೆ ಎಂದು ಗುರುಪ್ರಸಾದ್ ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಾಯುಕ್ತ ವರದಿ ತಿದ್ದಲು ಸಾಧ್ಯವಿಲ್ಲ: ಸಿಎಂ
ಹಣ ಹಂಚಿಕೆ: ಚೆನ್ನಿಗಪ್ಪ ಮಗ ಪರಾರಿ
ಶೀಘ್ರವೇ ರಂಗಾಯಣಕ್ಕೆ ಮಹಿಳಾ ನಿರ್ದೇಶಕರ ನೇಮಕ: ಶೋಭಾ
ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು: ಸಿಎಂ
ದೇವದುರ್ಗದಲ್ಲಿ 20 ಲಕ್ಷ ರೂ.ವಶಕ್ಕೆ
ಹಿಂದುಳಿದ ನಿಗಮಗಳ ವಿಲೀನ ಇಲ್ಲ: ಸರ್ಕಾರ ಸ್ಪಷ್ಟನೆ