ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಧುಗಿರಿ: ಕರಡಿ ದಾಳಿಗೆ ಚುನಾವಣಾ ಸಿಬ್ಬಂದಿ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧುಗಿರಿ: ಕರಡಿ ದಾಳಿಗೆ ಚುನಾವಣಾ ಸಿಬ್ಬಂದಿ ಬಲಿ
ಉಪಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಹೋಮ್ ಗಾರ್ಡ್ ಕರಡಿ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಮಧುಗಿರಿಯಲ್ಲಿ ನಡೆದಿದೆ. ಘಟನೆಯಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ಕೂಡ ತೀವ್ರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಹೋಂ ಗಾರ್ಡ್ ಎಂ.ಪಿ. ಮೆಳ್ಳವಳ್ಳಿ ಕರಡಿ ದಾಳಿಗೆ ಬಲಿಯಾದ ಸಿಬ್ಬಂದಿಯಾಗಿದ್ದಾರೆ. ಹಾವೇರಿಯಿಂದ ಗೃಹರಕ್ಷಕದಳದವನ್ನು ಕರೆತಂದಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಗಾಯಗೊಂಡಿದ್ದಾರೆ.

ಚುನಾವಣೆ ನಡೆಯುವ ಅಕ್ರಮ ತಡೆಯಲು ಮತ್ತು ಶಾಂತಿ ಕಾಪಾಡಲೆಂದು ಕರೆಸಿಕೊಳ್ಳಲಾಗಿದ್ದ ಸಿಬ್ಬಂದಿಗೆ ತಂಗಲು ಮಧುಗಿರಿಯ ದಂಡಿನಮಾರಮ್ಮ ದೇವಸ್ಥಾನ ಬಳಿಯ ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪವಿರುವ ಹಾಸ್ಟೆಲ್‌‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಮೆಳ್ಳಹಳ್ಳಿ ಪ್ರಕೃತಿ ಕರೆಗಾಗಿ ಸಮೀಪದ ಹಳ್ಳದ ಬಳಿ ಹೋಗಿದ್ದಾಗ ಕರಡಿಯೊಂದು ಇವರ ಮೇಲೆ ದಾಳಿ ನಡೆಸಿದೆ. ಕರಡಿ ದಾಳಿಯಿಂದ ಹೋಂ ಗಾರ್ಡ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ
ಲೋಕಾಯುಕ್ತ ವರದಿ ತಿದ್ದಲು ಸಾಧ್ಯವಿಲ್ಲ: ಸಿಎಂ
ಹಣ ಹಂಚಿಕೆ: ಚೆನ್ನಿಗಪ್ಪ ಮಗ ಪರಾರಿ
ಶೀಘ್ರವೇ ರಂಗಾಯಣಕ್ಕೆ ಮಹಿಳಾ ನಿರ್ದೇಶಕರ ನೇಮಕ: ಶೋಭಾ
ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು: ಸಿಎಂ
ಮಧುಗಿರಿ ಅತಿ ಸೂಕ್ಷ್ಮ ಪ್ರದೇಶ-ಚುನಾವಣಾ ಆಯೋಗ