ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಮಿನಿ ಸಮರ' - ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮಿನಿ ಸಮರ' - ಮತದಾನ ಆರಂಭ
ಅನಿತಾಕುಮಾರಸ್ವಾಮಿ ಸೇರಿದಂತೆ 4ಸಚಿವರ ಭವಿಷ್ಯ ನಿರ್ಧಾರ
ಶಾಸಕರ ರಾಜೀನಾಮೆಯಿಂದ ತೆರವಾದ ರಾಜ್ಯದ 8 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಉತ್ಸಾಹದಿಂದ ಬಂದು ಮತದಾನ ಮಾಡುತ್ತಿರುವುದು ಮತಗಟ್ಟೆಗಳಲ್ಲಿ ಕಂಡುಬಂದಿದೆ.

ಒಟ್ಟು ಈ ಎಂಟು ಕ್ಷೇತ್ರದಲ್ಲಿ 4 ಸಚಿವರು ಸೇರಿದಂತೆ 73 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೇ ಕೆಲವು ಕಡೆ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಈವರೆಗೆ ಶಾಂತಿಯುತ ಮತದಾನ ನಡೆಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಮತಗಟ್ಟೆಗಳ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

20 ಬಗೆಯ ಗುರುತಿನ ಚೀಟಿ ತೋರಿಸುವ ಮೂಲಕ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಹಿರಿಯ ನಾಗರಿಕರ ಗುರುತಿನ ಚೀಟಿ, ಸ್ವಾತಂತ್ರ್ಯ ಹೋರಾಟಗಾರರ, ಮಾಜಿ ಯೋಧರ ದೃಢೀಕರಣ ಪತ್ರ. ಡ್ರೈವಿಂಗ್ ಲೈಸೆನ್ಸ್. ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಬುಕ್ ಸೇರಿದಂತೆ 20 ಬಗೆಯ ಗುರುತಿನ ಚೀಟಿ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕುಟುಂಬ ಸಮೇತ ಬಂದು ಮತದಾನ ಮಾಡುತ್ತಿದ್ದಾರೆ.

ಸಚಿವರಾದ ಉಮೇಶ್ ಕತ್ತಿ (ಹುಕ್ಕೇರಿ), ಬಾಲಚಂದ್ರ ಜಾರಕಿಹೊಳೆ (ಅರಭಾವಿ), ಆನಂದ ಅಸ್ನೋಟಿಕರ್ (ಕಾರವಾರ), ಮತ್ತು ಶಿವನಗೌಡ ನಾಯಕ್ (ದೇವದುರ್ಗ) ಬಿಜೆಪಿ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಏತನ್ಮಧ್ಯೆ ಎಂಟು ಕ್ಷೇತ್ರಗಳ ಪೈಕಿ ಮಧುಗಿರಿ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಸೊಸೆ ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿಯ ಚೆನ್ನಿಗಪ್ಪ ಅವರಿಗೆ ತಿರುಗೇಟು ನೀಡಲು ನಿರ್ಧರಿಸಿದ್ದಾರೆ.

ಬಿಗಿ ಬಂದೋಬಸ್ತ್: ಎಂಟು ಕ್ಷೇತ್ರಗಳಲ್ಲಿ 1,613 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, 7,400 ಮಂದಿ ಚುನಾವಣಾ ಸಿಬ್ಬಂದಿಗಳಿದ್ದು, ಬಿಗಿ ಬಂದೋಬಸ್ತ್‌ಗಾಗಿ 9,500ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಪ್ರತಿ ಮತಗಟ್ಟೆಗಳಲ್ಲಿ ಆರು ಮಂದಿ ಸಿಬ್ಬಂದಿಗಳಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ವೀಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಧುಗಿರಿ: ಕರಡಿ ದಾಳಿಗೆ ಚುನಾವಣಾ ಸಿಬ್ಬಂದಿ ಬಲಿ
ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ
ಲೋಕಾಯುಕ್ತ ವರದಿ ತಿದ್ದಲು ಸಾಧ್ಯವಿಲ್ಲ: ಸಿಎಂ
ಹಣ ಹಂಚಿಕೆ: ಚೆನ್ನಿಗಪ್ಪ ಮಗ ಪರಾರಿ
ಶೀಘ್ರವೇ ರಂಗಾಯಣಕ್ಕೆ ಮಹಿಳಾ ನಿರ್ದೇಶಕರ ನೇಮಕ: ಶೋಭಾ
ಪಕ್ಷೇತರರು ನನ್ನ ಪಾಲಿಗೆ ಆಪತ್ಪಾಂಧವರು: ಸಿಎಂ