ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದರಾಮಯ್ಯ ಗೈರುಹಾಜರಿಗೆ ಕೋದಂಡ ಸಮಜಾಯಿಷಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದರಾಮಯ್ಯ ಗೈರುಹಾಜರಿಗೆ ಕೋದಂಡ ಸಮಜಾಯಿಷಿಕೆ
ಸಿದ್ದರಾಮಯ್ಯನವರು ಹಿಂದೆ ಕಬಡ್ಡಿ ಆಡುವಾಗ ಅವರ ಕಾಲಿಗೆ ಬಿದ್ದ ಪೆಟ್ಟು ಇದೀಗ ಮತ್ತೆ ನೋವು ಮರುಕಳಿಸಿದ್ದರಿಂದ ಅವರು ಈ ಬಾರಿಯ ಪ್ರಚಾರದಲ್ಲಿ ಭಾಗವಹಿಸಲಿಲ್ಲ- ಇದು ಸಿದ್ದು ಅವರ ಕಟ್ಟಾ ಬೆಂಬಲಿಗ ಮಾಜಿ ಸಂಸದ ಕೋದಂಡ ರಾಮಯ್ಯ ಅವರ ಸಮಜಾಯಿಷಿಕೆ.

ಹಿಂದೆ ಕಬಡ್ಡಿ ಆಡುವಾಗ ಕಾಲಿಗೆ ಆಗಿದ್ದ ನೋವು ಈಗ ಮರುಕಳಿಸಿದೆ ಹೀಗಾಗಿ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಕೆಲ ವಿಚಾರಗಳ ಕುರಿತು ಅಸಮಾಧಾನವಿದೆ. ಇದಕ್ಕೆ ಪಕ್ಷದ ನಾಯಕರ ನಡುವೆ ತಪ್ಪು ಕಲ್ಪನೆ ಹಾಗೂ ಹೊಂದಾಣಿಕೆ ಕೊರತೆ ಕಾರಣ. ಇದು ಶೀಘ್ರ ನಿವಾರಣೆಯಾಗಲಿದೆ ಎಂದರು.

ಇತ್ತೀಚೆಗೆ ಮೈಸೂರು ಪ್ರವಾಸದ ವೇಳೆ ಸಿದ್ದರಾಮಯ್ಯ ಅವರಿಗೆ ಕಾಲು ನೋವು ಇರಲಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಕೋದಂಡರಾಮ ಸ್ಪಷ್ಟ ಉತ್ತರ ನೀಡಲಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಬಿಡುತ್ತಾರೆಯೇ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ ಎಂಬುದು ಸುಳ್ಳು. ಅವರು ಕಾಂಗ್ರೆಸ್‌‌ನಲ್ಲೇ ಇದ್ದಾರೆ ಮತ್ತು ಕಾಂಗ್ರೆಸ್‌‌ನಲ್ಲೇ ಮುಂದುವರಿಯುತ್ತಾರೆ ಎಂದು ಕೋದಂಡರಾಮಯ್ಯ ಸ್ಪಷ್ಟಪಡಿಸಿದರು. ಬಿಜೆಪಿ ಬಗ್ಗೆ ಸಿದ್ದರಾಮಯ್ಯನವರಿಗೆ ಒಲವು ಇಲ್ಲ. ಆದ್ದರಿಂದ ಆ ಪಕ್ಷವನ್ನು ಅವರು ಸೇರುವುದಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮತ್ತೆ ಪಕ್ಷ ಸೇರುತ್ತಿರುವುದು ಸಂತಸದ ವಿಷಯ. ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಬಂಗಾರಪ್ಪ ಅವರನ್ನು ಕರೆ ತರಲಾಗುತ್ತಿದೆ ಎಂಬ ಭಾವನೆ ಸರಿಯಲ್ಲ ಎಂದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಮಿನಿ ಸಮರ' - ಮತದಾನ ಆರಂಭ
ಮಧುಗಿರಿ: ಕರಡಿ ದಾಳಿಗೆ ಚುನಾವಣಾ ಸಿಬ್ಬಂದಿ ಬಲಿ
ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ
ಲೋಕಾಯುಕ್ತ ವರದಿ ತಿದ್ದಲು ಸಾಧ್ಯವಿಲ್ಲ: ಸಿಎಂ
ಹಣ ಹಂಚಿಕೆ: ಚೆನ್ನಿಗಪ್ಪ ಮಗ ಪರಾರಿ
ಶೀಘ್ರವೇ ರಂಗಾಯಣಕ್ಕೆ ಮಹಿಳಾ ನಿರ್ದೇಶಕರ ನೇಮಕ: ಶೋಭಾ