ಎಂಟು ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭಗೊಂಡಿದ್ದು, ಕಾರವಾರ, ದೇವದುರ್ಗಗಳಲ್ಲಿ ನೀರಸವಾಗಿದ್ದು, ಉಳಿದೆಡೆ ಬಿರುಸಿನ ಮತದಾನ ನಡೆಯುತ್ತಿದೆ.
ರಾಜ್ಯಾದ್ಯಂತ ಕುತುಹಲದ ಕಣವಾಗಿರುವ ಮಧುಗಿರಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಏತನ್ಮಧ್ಯೆ ತುರುವೇಕೆರೆಯಲ್ಲಿ ಮತದಾರರ ಪಟ್ಟಿಯಲ್ಲಿ ಗೊಂದಲವಾಗಿದ್ದು, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಧುಗಿರಿ ಕ್ಷೇತ್ರದಲ್ಲಿ ತೀವ್ರ ಹಣಾಹಣಿ ನಡೆಯುತ್ತಿದ್ದು, ತಮಗೆ ಹಣ ನೀಡಿಲ್ಲ ಎಂದು ಹಣ ಕೊಡದ ಅಭ್ಯರ್ಥಿಯ ಮೇಲೆ ಮತದಾರರು ಗಲಾಟೆ ಮಾಡಿದ ಘಟನೆ ನಡೆದಿದೆ. ಜೆಡಿಎಸ್‌ನ ತುಮ್ಮಟ್ಟಿ ರಾಮಣ್ಣ ಎಂಬವರಿಗೆ ದಲಿತ ಸಮುದಾಯದ ಜನರು ಅಡ್ಡಗಟ್ಟಿ ಹಣ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಚುನಾವಣಾ ಮೂಲಗಳು ತಿಳಿಸಿವೆ.
ಇಂದಿನ ಮಿನಿಮಹಾ ಸಮರದಲ್ಲಿ ನಾಲ್ವರು ಸಚಿವರು ಸೇರಿದಂತೆ ಒಟ್ಟು 73 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು,
3 ಗಂಟೆವರೆಗೆ ಚಲಾವಣೆಗೊಂಡ ಮತದಾನದ ವಿವರ:
ಹುಕ್ಕೇರಿ-ಶೇ.55.31, ಅರಭಾವಿ-ಶೇ.55.63, ಕಾರವಾರ-ಶೇ.40, ದೇವದುರ್ಗ-ಶೇ.25, ಮಧುಗಿರಿ-ಶೇ.45, ಮದ್ದೂರು-ಶೇ.57.03 , ದೊಡ್ಡಬಳ್ಳಾಪುರ-ಶೇ.45, ತುರುವೇಕೆರೆ-ಶೇ.49. |