ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣಾ ಆಯೋಗದ ವಿರುದ್ಧ ದೇವೇಗೌಡ ಕಿಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಆಯೋಗದ ವಿರುದ್ಧ ದೇವೇಗೌಡ ಕಿಡಿ
ಪೊಲೀಸರು ಬಿಜೆಪಿಯ ಏಜೆಂಟ್‌‌ಗಳಾಗಿದ್ದಾರೆ...
ದೇವೇಗೌಡರು ಮತ್ತೊಮ್ಮೆ ಚುನಾವಣಾ ಆಯೋಗದ ಕ್ರಮದ ವಿರುದ್ಧ ಕಿಡಿ ಕಾರಿದ್ದಾರೆ. ಅನಿತಾ ಕುಮಾರಸ್ವಾಮಿ ಜೊತೆ ಇದ್ದ ಅವರ ತಮ್ಮನನ್ನು ಕ್ಷೇತ್ರದಿಂದ ಆಯೋಗ ಹೊರಗೆ ಕಳುಹಿಸಿದೆ. ಆ ಹೆಣ್ಣು ಮಗಳು ಒಬ್ಬಳೇ ಇಡೀ ಕ್ಷೇತ್ರವನ್ನು ಸುತ್ತಲು ಸಾಧ್ಯವಾ? ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

ಮಧುಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಹೋದರ ಡಾ.ಚನ್ನಪ್ಪ ಗೌಡ ಅವರನ್ನು ಆಯೋಗ ನೀತಿ ಸಂಹಿತೆ ಪ್ರಕಾರ ಕ್ಷೇತ್ರದಿಂದ ಗುರುವಾರ ಸಂಜೆ ಹೊರ ಕಳುಹಿಸಿತ್ತು. ಆಯೋಗದ ಈ ಕ್ರಮಕ್ಕೆ ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರವಾನಗಿ ಪಡೆದ ವಾಹನದಲ್ಲಿ ಪ್ರಚಾರ ಮಾಡಲು ಹೋಗಿದ್ದ ಹುಕ್ಕೇರಿಯ ಜೆಡಿಎಸ್ ಅಭ್ಯರ್ಥಿ ಬಸವರಾಜ ಮಟಗಾರ ಅವರ ಪುತ್ರನನ್ನು ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಗೌಡರು ಹೇಳಿದರು. ಅಲ್ಲದೇ ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚೆನ್ನಿಗಪ್ಪ ಪುತ್ರ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದುದನ್ನು ನೋಡಿದ್ದರೂ ಪೊಲೀಸರು ಅವರನ್ನು ಬಂಧಿಸದೇ ಕೈ ಬಿಟ್ಟಿದ್ದಾರೆ. ಪೊಲೀಸರು ಬಿಜೆಪಿಯ ಏಜೆಂಟ್‌‌ಗಳಂತೆ ವರ್ತಿಸುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ ಎಂದು ಗೌಡರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಮಿನಿ ಸಮರ' - ಚುರುಕುಗೊಂಡ ಮತದಾನ
ಸಿದ್ದರಾಮಯ್ಯ ಗೈರುಹಾಜರಿಗೆ ಕೋದಂಡ ಸಮಜಾಯಿಷಿಕೆ
'ಮಿನಿ ಸಮರ' - ಮತದಾನ ಆರಂಭ
ಮಧುಗಿರಿ: ಕರಡಿ ದಾಳಿಗೆ ಚುನಾವಣಾ ಸಿಬ್ಬಂದಿ ಬಲಿ
ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ
ಲೋಕಾಯುಕ್ತ ವರದಿ ತಿದ್ದಲು ಸಾಧ್ಯವಿಲ್ಲ: ಸಿಎಂ