ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೊಡ್ಡಬಳ್ಳಾಪುರ: ಜೇನು ದಾಳಿ - ಮತದಾನ ಸ್ಥಗಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೊಡ್ಡಬಳ್ಳಾಪುರ: ಜೇನು ದಾಳಿ - ಮತದಾನ ಸ್ಥಗಿತ
ದೊಡ್ಡಬಳ್ಳಾಪುರ ಕ್ಷೇತ್ರದ ಕಾಡತಿಪ್ಪೂರಿನಲ್ಲಿ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಮತದಾರರು ಕಂಗಾಲಾಗಿ ದಿಕ್ಕೆಟ್ಟು ಓಡಿಹೋದ ಪ್ರಸಂಗ ನಡೆಯಿತಲ್ಲದೇ, ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಕಾಡತಿಪ್ಪೂರಿನಲ್ಲಿ ಮತದಾನ ನಡೆಯುತ್ತಿದ್ದ ವೇಳೆ ಜೇನುನೊಣಗಳು ಗುಂಪು, ಗುಂಪಾಗಿ ದಾಳಿ ನಡೆಸಿದಾಗ ಮತದಾರರು ಭಯದಿಂದ ಓಟ ಕಿತ್ತಿದ್ದರು. ಇದರಿಂದ ಮತದಾನವನ್ನು ಸ್ಥಗಿತಗೊಳಿಸಲಾಗಿದ್ದು, ಮಧ್ನಾಹ್ನ 2ಗಂಟೆ ನಂತರ ಮತ್ತೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಎಂಟು ಕ್ಷೇತ್ರಗಳಲ್ಲಿ ಕಾರವಾರ ಮತ್ತು ದೇವದುರ್ಗ ಹೊರತುಪಡಿಸಿ, ಉಳಿದೆಡೆ ಬಿರುಸಿನ ಮತದಾನ ನಡೆಯುತ್ತಿದೆ, ಮಧುಗಿರಿ, ತುರುವೇಕೆರೆಗಳಲ್ಲಿ ಗಲಾಟೆ ನಡೆದಿದ್ದರೆ, ಉಳಿದ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.

ಏತನ್ಮಧ್ಯೆ ಪೊಲೀಸ್ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ರಂತೆ ವರ್ತಿಸುತ್ತಿರುವುದಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಕಿಡಿಕಾರಿದ್ದಾರೆ. ಅಲ್ಲದೇ ದೊಡ್ಡಬಳ್ಳಾಪುರ ರಾಜಘಟ್ಟದ ಬಳಿ ಸುಮಾರು 1.48ಲಕ್ಷ ರೂಪಾಯಿಯಷ್ಟು ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣಾ ಆಯೋಗದ ವಿರುದ್ಧ ದೇವೇಗೌಡ ಕಿಡಿ
'ಮಿನಿ ಸಮರ' - ಚುರುಕುಗೊಂಡ ಮತದಾನ
ಸಿದ್ದರಾಮಯ್ಯ ಗೈರುಹಾಜರಿಗೆ ಕೋದಂಡ ಸಮಜಾಯಿಷಿಕೆ
'ಮಿನಿ ಸಮರ' - ಮತದಾನ ಆರಂಭ
ಮಧುಗಿರಿ: ಕರಡಿ ದಾಳಿಗೆ ಚುನಾವಣಾ ಸಿಬ್ಬಂದಿ ಬಲಿ
ಜ.3: ದೂರದರ್ಶನದಲ್ಲಿ ಪೇಜಾವರಶ್ರೀ ಸಾಕ್ಷ್ಯಚಿತ್ರ ಪ್ರಸಾರ