ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನವದೆಹಲಿಯಿಂದ ಕೇರಳಕ್ಕೆ ಪ್ರಯಾಣಿಸುತ್ತಿದ್ದ ನಾಲ್ವರನ್ನು ನಗರದ ಕಂಕನಾಡಿ ರೈಲು ನಿಲ್ದಾಣದಲ್ಲಿ ಕೇರಳದ ಭಯೋತ್ಪಾದನಾ ನಿಗ್ರಹದಳ(ಎಟಿಎಸ್)ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಬಂಧಿತರಲ್ಲಿ ಒಬ್ಬಾತ ಹಮೀದ್ ಎಂದು ಗುರುತಿಸಲಾಗಿದೆ. ಈತ ಕೇರಳದ ಮಟ್ಟಂಚೇರಿ ನಿವಾಸಿಯಾಗಿದ್ದು, ಅಲ್ಲಿನ ಮಾಜಿ ಮುಖ್ಯಮಂತ್ರಿ ಇ.ಕೆ.ನಾಯನಾರ್ ಅವರ ಹತ್ಯಾ ಯತ್ನದ ಪ್ರಮುಖ ಆರೋಪಿ ಎನ್ನಲಾಗಿದೆ. ಇನ್ನೊಬ್ಬ ಬಾಂಗ್ಲಾ ದೇಶದ ನಿವಾಸಿ ರಿಯಾಜ್ ಎನ್ನಲಾಗಿದ್ದು, ಉಳಿದಿಬ್ಬರ ಗುರುತು ಪತ್ತೆಯಾಗಿಲ್ಲ.
ಕಣ್ಣೂರಿನಲ್ಲಿ ಇತ್ತೀಚೆಗೆ ಬಂಧಿತನಾದ ಶಂಕಿತ ಉಗ್ರನೊಬ್ಬ ನೀಡಿದ ಮಾಹಿತಿ ಮೇರೆಗೆ ಕೇರಳದ ಭಯೋತ್ಪಾದನಾ ನಿಗ್ರಹ ಪಡೆ ಡಿವೈಎಸ್‌ಪಿ ಈ ನಾಲ್ವರನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡಿದ್ದರು. |