ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಬ್ರಾಹ್ಮಣರ ಸರ್ಕಾರ. ಒಟ್ಟು 11 ಬ್ರಾಹ್ಮಣರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿದ್ದು,ಬ್ರಾಹಣರೇ ಹೆಚ್ಚಿರುವ ಈ ಸರ್ಕಾರಕ್ಕೆ ಸ್ವಾಮೀಜಿಗಳ ಬೆಂಬಲಬೇಕು. ಆದರೆ ಎಲ್ಲರೂ ಅರ್ಹತೆ ಮೇರೆಗೆ ಅವರವರ ಸ್ಥಾನ ಗಿಟ್ಟಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ತಿಳಿಸಿದ್ದಾರೆ.
ನಗರದಲ್ಲಿ ಸಾಲಿಗ್ರಾಮ ಮತ್ತು ಕೂಟ ಸಮಾಜ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಕೂಟ ಸಮ್ಮೇಳನ ಉದ್ಘಾಟಿಸಿದ ನಂತರ ರಾಮಚಂದ್ರಗೌಡ ಆಡಿದ ಮಾತುಗಳಿವು.
ಪ್ರಜಾ ತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಸಮುದಾಯದ ಹಕ್ಕು ಬಾಧ್ಯತೆಗಳ ರಕ್ಷಣೆಗೆ ಸಂಘಟನೆ ಅನಿವಾರ್ಯ ಎಂದು ಅವರು ಹೇಳಿದರು. ಕೂಟ ಸಮಾಜದವರು ಇಂದು ವೃತ್ತಿ, ವ್ಯಾಪಾರ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಜಗತ್ತಿನೆಲ್ಲಡೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂದೇಶದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. |