ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಕೈ'ಗೆ ಮುಖಭಂಗ - 5 ಕ್ಷೇತ್ರ ಬಿಜೆಪಿ ತೆಕ್ಕೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಕೈ'ಗೆ ಮುಖಭಂಗ - 5 ಕ್ಷೇತ್ರ ಬಿಜೆಪಿ ತೆಕ್ಕೆಗೆ
ಬಿಜೆಪಿಗೆ ಜನಾದೇಶ-ನೆಲೆಕಂಡುಕೊಂಡ ಜೆಡಿಎಸ್
NRB
ರಾಜ್ಯದ ಎಂಟು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 5 ಸ್ಥಾನಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದರೆ, ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದೂ ಸ್ಥಾನವನ್ನು ಗಳಿಸದೇ ತೀವ್ರ ಮುಖಭಂಗ ಅನುಭವಿಸಿದೆ.

ಮದ್ದೂರಿನಲ್ಲಿ ಜೆಡಿಎಸ್‌ನ ಶಾಸಕ ಸಿದ್ದರಾಜು ಅವರ ಅಕಾಲಿಕ ಮರಣದಿಂದ ಅಲ್ಲಿನ ಸ್ಥಾನ ತೆರವುಗೊಂಡಿದ್ದರೆ, ಉಳಿದ ಏಳು ಸ್ಥಾನಕ್ಕೆ ಬಿಜೆಪಿ ನಡೆಸಿದ ಆಪರೇಶನ್ ಕಮಲದಿಂದಾಗಿ ಉಪಚುನಾವಣೆ ನಡೆಯುಂತಾಗಿತ್ತು.
NRB
ಇದೀಗ ಆಪರೇಶನ್ ಕಮಲಕ್ಕೆ ಮತದಾರ ಸ್ಪಷ್ಟ ಜನಾದೇಶ ನೀಡಿದ್ದರೆ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಮೂಲಕ ತೀವ್ರ ಮುಖಭಂಗಕ್ಕೀಡಾಗಿದೆ.

ಇದರೊಂದಿಗೆ ಭಾರತೀಯ ಜನತಾಪಕ್ಷ ರಾಜ್ಯದಲ್ಲಿ ಸ್ವಂತ ಬಲದೊಂದಿಗೆ ಸರ್ಕಾರದ ಕುರ್ಚಿಯನ್ನು ಭದ್ರಪಡಿಸಿಕೊಂಡಿದೆ. ಇದೀಗ ಒಟ್ಟು 116 ಸ್ಥಾನ ಬಿಜೆಪಿಗೆ, ಕಾಂಗ್ರೆಸ್ 77, ಜೆಡಿಎಸ್-23 ಸ್ಥಾನ ಹೊಂದಿದಂತಾಗಿದೆ.
NRB
ಬಿಜೆಪಿ ವಿಜಯೋತ್ಸಾಹ: ಎಂಟು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿ ಇದೀಗ ಎಲ್ಲೆಡೆ ವಿಜಯೋತ್ಸಾಹದ ಸಂಭ್ರಮವನ್ನು ಆಚರಿಸುತ್ತಿದೆ. ಬಿಜೆಪಿ ಜನಪರ ಆಡಳಿತ, ಅಭಿವೃದ್ದಿಗಾಗಿ ಮತದಾರರು ನೀಡಿದ ಜನಾದೇಶ ಇದಾಗಿದೆ ಎಂದು ಬಿಜೆಪಿ ತಿಳಿಸಿದೆ.

ಕಾಂಗ್ರೆಸ್ ಆತ್ಮಾವಲೋಕನ: ಬಿಜೆಪಿ ನಡೆಸಿದ ಆಪರೇಶನ್ ಕಮಲಕ್ಕೆ ಮತದಾರರು ತಕ್ಕ ಉತ್ತರ ನೀಡುತ್ತಾರೆಂದು ಕಾಂಗ್ರೆಸ್ ಹೇಳಿಕೊಂಡಿದ್ದರೂ ಕೂಡ, ಎಂಟು ಕ್ಷೇತ್ರಗಳಲ್ಲಿ ಮತದಾರರ 'ಕೈ' ಬಿಟ್ಟಿರುವುದು ತೀವ್ರ ಮುಖಭಂಗಕ್ಕೆ ಕಾರಣವಾಗುವ ಮೂಲಕ ಮತದಾರರ ಕಾಂಗ್ರೆಸ್ ಅನ್ನು ತಿರಸ್ಕರಿಸುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಯು' ಟರ್ನ್ ಪಡೆದುಕೊಂಡ ತುರುವೇಕೆರೆ: ಮಧುಗಿರಿ ಅತ್ಯಂತ ಕುತೂಹಲ ಮೂಡಿಸಿದ ಕಣವಾಗಿತ್ತು. ಏತನ್ಮಧ್ಯೆ ಮತಎಣಿಕೆ ಆರಂಭದಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಡಿ.ಲಕ್ಷ್ಮೀನಾರಾಯಣ ಜಯ ಸಾಧಿಸಿರುವುದಾಗಿಯೇ ಘೋಷಿಸಲಾಗಿತ್ತು. ಆದರೆ ಅಂತಿಮ ಸುತ್ತಿನ ಮತಎಣಿಕೆಯಲ್ಲಿ ಜೆಡಿಎಸ್‌ನ ಕೃಷ್ಣಪ್ಪ ಮುನ್ನಡೆ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಕೊನೆ ಕ್ಷಣ ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತಲ್ಲದೆ, ಕೃಷ್ಣಪ್ಪ ಅವರು 3301 ಮತಗಳ ಅಂತರದಿಂದ ಗೆಲುವಿನ ನಗು ಬೀರಿದ್ದಾರೆ.

ಐದು ಕ್ಷೇತ್ರ ಬಿಜೆಪಿ ತೆಕ್ಕೆಗೆ:

ಹುಕ್ಕೇರಿ - ಉಮೇಶ್ ಕತ್ತಿ

ಅರಭಾವಿ - ಬಾಲಚಂದ್ರ ಜಾರಕಿಹೊಳಿ

ದೊಡ್ಡಬಳ್ಳಾಪುರ - ಜೆ.ನರಸಿಂಹಸ್ವಾಮಿ

ದೇವದುರ್ಗ - ಶಿವನಗೌಡ ನಾಯಕ್

ಕಾರವಾರ - ಆನಂದ ಅಸ್ನೋಟಿಕರ್

3 ಕ್ಷೇತ್ರ ಜೆಡಿಎಸ್ ಪಾಲು:

ಮಧುಗಿರಿ - ಅನಿತಾಕುಮಾರಸ್ವಾಮಿ

ಮದ್ದೂರು - ಕಲ್ಪನಾ ಸಿದ್ದರಾಜು

ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಿನಿ ಸಮರ:ಜಾರಕಿಹೊಳಿ-ಕತ್ತಿಗೆ ಜಯ
ಬೆಂ.ಜಿ.ಪಂ: ಬಯೋಕಾನ್ ವಿರುದ್ಧ ಕ್ರಮಕ್ಕೆ ಆಗ್ರಹ
ಶಾಸ್ತ್ರೀಯ ಸ್ಥಾನ ಸಿಕ್ಕಿದೆಯೇ?: ಹನುಮಂತರಾಯಪ್ಪ
ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯವಿಲ್ಲ: ದೇಶಪಾಂಡೆ
ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳಲು ಸ್ವತಂತ್ರರು: ಡಿಕೆಶಿ
ಇಂಚಗೇರಿ ಹತ್ಯಾಕಾಂಡ:44ಆರೋಪಿಗಳು ಖುಲಾಸೆ