ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪಿಗೆ ತಲೆಬಾಗುವುದಾಗಿ ತಿಳಿಸಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಈ ಸೋಲನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.ಆದರೆ ಈ ಸೋಲು ಕಾಂಗ್ರೆಸ್ ಸೋಲಲ್ಲ, ಇದು ಪ್ರಜಾಪ್ರಭುತ್ವದ ಸೋಲು ಎಂದು ಬಣ್ಣಿಸಿದ ಅವರು, ಆಡಳಿತಾರೂಢ ಬಿಜೆಪಿ ಹಣ, ಹೆಂಡದ ಮೂಲಕ ಪಡೆದುಕೊಂಡ ಗೆಲುವು ಇದಾಗಿದೆ ಎಂದರು.ಒಂದು ದೃಷ್ಟಿಯಿಂದ ಈ ಚುನಾವಣೆ ಕಾಂಗ್ರೆಸ್‌ಗೊಂದು ಪಾಠವಾಗಿದೆ. ಇದರಿಂದ ಪಕ್ಷ ಮತ್ತಷ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಚುನಾವಣೆ ಸಂದರ್ಭದಲ್ಲಿ ಹಣ,ಹೆಂಡದ ಹೊಳೆ ಹರಿಸುತ್ತಿದ್ದು, ಆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾಕಷ್ಟು ಬಾರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು. |