ಬೆಂಗಳೂರು ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಕಳೆದ ರಾತ್ರಿ ನಡೆಸಿರುವ ಕಾರ್ಯಾಚರಣೆಯಲ್ಲಿ ಪುಣೆಯ ಜಾನವಾಡಿ ಸಮೀಪದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು ಇವರಲ್ಲಿ ಓರ್ವನ ಹೆಸರು ಶಬ್ಬೀರ್ ಹುಸೇನ್ ಎಂದು ತಿಳಿದು ಬಂದಿಗೆ.
ಇವರಿಗೆ ಅಹಮದಾಬಾದ್ ಹಾಗೂ ಇತರೆಡೆ ಸ್ಫೋಟ ನಡೆಸಿರುವ ದುಷ್ಕರ್ಮಿಗಳೊಂದಿಗೆ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಯೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗಿದೆ.
ಕಳೆದ ಜುಲೈಯಲ್ಲಿ ದುಷ್ಕರ್ಮಿಗಳು ನಡೆಸಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಓರ್ವಮಹಿಳೆ ಸತ್ತು ಇತರ ಹಲವರು ಗಾಯಗೊಂಡಿದ್ದರು. |