ಗೆಲುವಿನಿಂದ ಉತ್ತೇಜಿತರಾಗಿರುವ ಅನಿತಾ ಕುಮಾರಸ್ವಾಮಿ ತಮ್ಮ ಕ್ಷೇತ್ರದ ಜನತೆಗೆ ಲಭ್ಯವಾಗುವ ನಿಟ್ಟಿನಲ್ಲಿ ಮಧುಗಿರಿಯಲ್ಲಿ ಮನೆ ಹಾಗೂ ಕಚೇರಿಯನ್ನು ಹೊಂದುವ ಯೋಜನೆ ಹಾಕಿಕೊಂಡಿದ್ದಾರೆ. ಅಭಿವೃದ್ದಿ ಮಂತ್ರವನ್ನು ಜಪಿಸಿರುವ ಅನಿತಾ, ರಾಮನಗರ ಮಾದರಿಯಲ್ಲಿ ತಮ್ಮ ಕ್ಷೇತ್ರವನ್ನು ಅಭಿವೃದ್ದಿಪಡಿಸಲು ಕಂಕಣಬದ್ಧರಾಗಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಉತ್ತಮ ಕೆಲಸಗಳು ಗೆಲುವು ಸಾಧಿಸುವಲ್ಲಿ ಸಾಕಷ್ಟು ನೆರವಾದವು ಎನ್ನುವ ಅನಿತಾ ಇದು ಬಡವರ ಸೇವೆ ಮಾಡಲು ನನಗೆ ದೊರಕಿರುವ ಅವಕಾಶ. ಜನ ನನ್ನ ಮೇಲೆ ಹರಿಸಿದ ಪ್ರೀತಿ ಅಭಿಮಾನ ನನಗೆ ಖುಷಿ ತಂದಿದೆ ಎಂದು ಹೇಳಿದರು.
ಅನಿತಾ ಕುಮಾರಸ್ವಾಮಿ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಸ್ವ ಸಹಾಯ ಗುಂಪುಗಳು ಮತ್ತು ಮಹಿಳಾ ಸಂಘಟನೆ ಪ್ರೋತ್ಸಾಹಿಸುವಲ್ಲಿ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸಲಿ ಸರ್ಕಾರದ ಸಂಪನ್ಮೂಲ ಸಾಕಾಗುವುದಿಲ್ಲ. ನಾನು ಸಾಮಾಜಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳು ಮತ್ತು ಶ್ರೀಮಂತರ ಬೆಂಬಲವನ್ನು ಕೂಡಾ ಕೋರಲಿದ್ದೇನೆ ಎಂದು ತಮ್ಮ ಗೆಲುವಿನ ನಂತರ ಸುದ್ದಿಗಾರರಿಗೆ ತಿಳಿಸಿದರು. |