ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷೇತರರನ್ನು ಕಾಡುತ್ತಿರುವ ಆತಂಕ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷೇತರರನ್ನು ಕಾಡುತ್ತಿರುವ ಆತಂಕ...
ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿದ್ದೇ ಪಕ್ಷೇತರರ ಮೇಲಿನ ಅಪನಂಬಿಕೆಯಿಂದ. ಉಪ ಚುನಾವಣೆ ಫಲಿತಾಂಶ ಆ ಆತಂಕವನ್ನು ದೂರ ಮಾಡಿದೆ. ಆದರೆ, ಅದೇ ಆತಂಕ ಈಗ ಪಕ್ಷೇತರರನ್ನು ಕಾಡುತ್ತಿದೆ. ಆದರೆ ಇದನ್ನು ಮುಖ್ಯಮಂತ್ರಿಯಾದಿಯಾಗಿ ಯಾವ ಪಕ್ಷೇತರರು ಒಪ್ಪುತ್ತಿಲ್ಲ. ತಾವು ಐದು ವರ್ಷ ಸುಭದ್ರವಾಗಿಯೇ ಇರುತ್ತೇವೆ ಎನ್ನುತ್ತಾರೆ ಪಕ್ಷೇತರರು.

ದಶಕಗಳ ಕಾಲದಿಂದಲೂ ಪಕ್ಷಕ್ಕಾಗಿ ದುಡಿದ ನಾಯಕರು ಬಿಜೆಪಿಯಲ್ಲಿ ಅನೇಕರಿದ್ದಾರೆ. ಅಂಥವರಿಗೆ ಅವಕಾಶ ನೀಡದೆ ತಮ್ಮನ್ನು ಸಚಿವರಾಗಿಯೇ ಉಳಿಸಿಕೊಳ್ಳುತ್ತಾರೆಯೇ? ಎಂಬ ಗುಮಾನಿ ಪಕ್ಷೇತರರನ್ನು ಕಾಡುತ್ತಿದೆ. ಆದರೆ ಆಪರೇಷನ್ ಕಮಲದ ಫಲಿತಾಂಶವನ್ನು ತಮ್ಮ ಸರ್ಕಾರದ ಸಾಧನೆಗೆ ಜನಮನ್ನಣೆ ಎಂದು ಸಂಭ್ರಮಿಸಿದ್ದಾರೆ.

ಗೆಲುವಿನ ಸಂತಸದಲ್ಲಿ ತೇಲುತ್ತಿರುವ ಬಿಜೆಪಿ ತಕ್ಷಣಕ್ಕೆ ಪಕ್ಷೇತರರ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದಿದ್ದರು, ಮುಂದಿನ ದಿನಗಳಲ್ಲಿ ಇವರ ಬಗ್ಗೆ ಚಿಂತಿಸುವ ಸಾಧ್ಯತೆಗಳಿವೆ.

ಸರ್ಕಾರದ ಅವಧಿ ಪೂರ್ಣಗೊಳ್ಳುವವರೆಗೆ ಬೆಂಬಲಿಸುವುದಾಗಿ ಭರವಸೆ ನೀಡಿದ್ದೆವು. ಅದೇ ರೀತಿ ತಮ್ಮನ್ನು ಕೈ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಅವರೂ ಹೇಳಿದ್ದಾರೆ. ಹಾಗಾಗಿ ತಮಗೇನು ತೊಂದರೆ ಇಲ್ಲ ಎನ್ನುತ್ತಾರೆ ಸಣ್ಣ ಕೈಗಾರಿಕೆ ಸಚಿವ ವೆಂಕಟರಮಣಪ್ಪ.

ಈ ನಡುವೆ ಬಿಜೆಪಿಗೆ ಸಾಥ್ ನೀಡಿರುವ ಪಕ್ಷೇತರರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅವರ ಸ್ಥಾನಕ್ಕೆ ಚ್ಯುತಿ ಬಾರದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಧುಗಿರಿ ಅಭಿವೃದ್ಧಿಗೆ ಒತ್ತು: ಅನಿತಾಕುಮಾರಸ್ವಾಮಿ
ಬೆಂಗಳೂರು ಸ್ಫೋಟ: ಇಬ್ಬರು ಶಂಕಿತ ಉಗ್ರರ ಬಂಧನ
ಹಲ್ಲೆ:ತಪ್ಪಿತಸ್ಥರ ವಿರುದ್ಧ ಕ್ರಮ-ಯಡಿಯೂರಪ್ಪ
ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯ ಕಾರಣ: ವರ್ತೂರು
ಇದು ಪ್ರಜಾಪ್ರಭುತ್ವದ ಸೋಲು: ಆರ್‌.ವಿ.ದೇಶಪಾಂಡೆ
ಮತದಾರರಿಗೆ ಯಡಿಯೂರಪ್ಪ ಅಭಿನಂದನೆ