ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸರ್ಕಾರ ಭದ್ರ - ಮಾನ ಕಳೆದುಕೊಂಡ ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ಕಾರ ಭದ್ರ - ಮಾನ ಕಳೆದುಕೊಂಡ ಕಾಂಗ್ರೆಸ್
ರಾಜ್ಯದಲ್ಲಿ ನಡೆದ ಮಿನಿ ಚುನಾವಣಾ ಸಮರದಲ್ಲಿ ಬಿಜೆಪಿ ಐದು ಸ್ಥಾನ ಹಾಗೂ ಜೆಡಿಎಸ್ 3 ಸ್ಥಾನ ಪಡೆದು ಗೆಲುವಿನ ನಗು ಬೀರಿದ್ದು, ಇದರೊಂದಿಗೆ ಆಡಳಿತಾರೂಢ ಬಿಜೆಪಿ ಪೂರ್ಣಬಹುಮತ ಪಡೆಯವುದರೊಂದಿಗೆ ತಮ್ಮ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಂಡಂತಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತಕ್ಕೆ ಬೇಕಾಗಿದ್ದ 3ಸ್ಥಾನಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ 6ಮಂದಿ ಪಕ್ಷೇತರರ ಬೆಂಬಲದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿತ್ತು. ಬಳಿಕ ಆಪರೇಶನ್ ಕಮಲದ ಮೂಲಕ ಏಳು ಮಂದಿಯನ್ನು ಬಿಜೆಪಿಗೆ ಸೆಳೆದುಕೊಳ್ಳುವ ಮೂಲಕ ರಾಜ್ಯದ ಏಳು ಕ್ಷೇತ್ರಗಳಲ್ಲಿ (ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಸಿದ್ದರಾಜು ಸಾವಿನಿಂದಾಗಿ ಆ ಸ್ಥಾನ ತೆರವುಗೊಂಡಿತ್ತು) ಉಪ ಚುನಾವಣೆ ನಡೆಯುವಂತಾಗಿತ್ತು.

ಇದೀಗ ಉಪಚುನಾವಣೆಯಲ್ಲಿ ಐದು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಭಾಜಪ ತನ್ನ ಬಲವನ್ನು 115ಕ್ಕೆ (ಪಕ್ಷೇತರರು ಸೇರಿ 121) ವೃದ್ದಿಸಿಕೊಂಡಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ 77 ಹಾಗೂ ಜೆಡಿಎಸ್ 24ಸ್ಥಾನಗಳನ್ನು ಹೊಂದಿದಂತಾಗಿದೆ.

ಅಭ್ಯರ್ಥಿಗಳ ಮತವಿವರ: ತೀವ್ರ ಕುತೂಹಲ ಕೆರಳಿಸಿದ್ದ ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಅನಿತಾಕುಮಾರಸ್ವಾಮಿ ಜಯ ಸಾಧಿಸಿದ್ದು, ಅವರು 49,416ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ರಾಜಣ್ಣ 45,701 ಹಾಗೂ ಬಿಜೆಪಿಯ ಚೆನ್ನಿಗಪ್ಪ 29,437ಮತ ಪಡೆದು ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

ಅದೇ ರೀತಿ ಆಪರೇಶನ್ ಕಮಲದಿಂದ ತೆರವಾಗಿದ್ದ ತುರುವೇಕೆರೆಯಲ್ಲಿ ಈ ಬಾರಿ ಜೆಡಿಎಸ್ ಗೆಲುವು ಕಂಡಿದೆ. ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ 55,801, ಬಿಜೆಪಿಯ ಲಕ್ಷ್ಮೀನಾರಾಯಣ 52,453 ಹಾಗೂ ಕಾಂಗ್ರೆಸ್‌ನ ನಂಜೇಗೌಡ 15,204ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಜೆಡಿಎಸ್‌ನ ಸಿದ್ದರಾಜು ಅವರ ಸಾವಿನಿಂದ ತೆರವಾಗಿದ್ದ ಮದ್ದೂರು ಕ್ಷೇತ್ರದಲ್ಲಿ ಅನುಕಂಪದ ಅಲೆ ಕೆಲಸ ಮಾಡಿದ್ದು, ಜೆಡಿಎಸ್‌ನ ಕಲ್ಪನಾ ಸಿದ್ದರಾಜು ಅವರು 69,397ಮತ ಗಳಿಸಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಿ.ಸಿ.ತಮ್ಮಣ್ಣ 49,929 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಗುರುಚರಣ್ ಕೇವಲ 13,468 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಅರಭಾವಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾಲಚಂದ್ರ ಜಾರಕಿಹೊಳೆ 70,986ಮತ ಪಡೆದು ವಿಜಯಲಕ್ಷಿಯನ್ನು ಮೂರನೇ ಬಾರಿಗೆ ಒಲಿಸಿಕೊಂಡಿದ್ದಾರೆ, ಕಾಂಗ್ರೆಸ್‌ನ ವಿವೇಕ ರಾವ್ ಪಾಟೀಲ 46,127ಮತ ಪಡೆದಿದ್ದರೆ, ಜೆಡಿಎಸ್‌ನ ಅರವಿಂದ ದಳವಾಯಿ 5135ಮತ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.

ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಅವರು ಅತ್ಯಧಿಕ ಮತಗಳ ಅಂತರದಿಂದ ಜಯ ಸಾಧಿಸಿದ ಅವರು 85,651ಮತ ಗಳಿಸಿದ್ದರೆ, ಪ್ರತಿಸ್ಪರ್ಧಿಗಳಾಗಿದ್ದ ಕಾಂಗ್ರೆಸ್‌ನ ಜಯಪ್ರಕಾಶ್ ನವಲವಾಡೆ 11,988 ಹಾಗೂ ಜೆಡಿಎಸ್‌ನ ಮಠಗಾರ 15,705ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ದೇವದುರ್ಗದಲ್ಲಿ ಮಾವನನ್ನೇ ಅಳಿಯ ಸೋಲಿಸಿದ ಕ್ಷೇತ್ರವಾಗಿದ್ದು,ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ 48,356ಮತ ಪಡೆದು ಜಯ ಸಾಧಿಸಿದ್ದಾರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಭಗವಂತ ಬಿ.ನಾಯಕ್32,104 ಹಾಗೂ ಜೆಡಿಎಸ್‌ನ ಡಾ.ಸಿ.ರಘು 13,917ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದ್ದ ಕಾರವಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ ಅಸ್ನೋಟಿಕರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸತೀಶ್ ಸೈಲ್ ಅವರನ್ನು 17,343 ಮತಗಳ ಅಂತರದಿಂದ ಸೋಲಿಸಿದ್ದಾರೆ.

ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ಜಾಲಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಜೆ.ನರಸಿಂಹ ಸ್ವಾಮಿ ಅವರು ಕಾಂಗ್ರೆಸ್‌ನ ವೆಂಕಟಾಚಲಯ್ಯ ಅವರನ್ನು 13,091 ಮತಗಳಿಂದ ಪರಾಭವಗೊಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಕ್ಷೇತರರನ್ನು ಕಾಡುತ್ತಿರುವ ಆತಂಕ...
ಮಧುಗಿರಿ ಅಭಿವೃದ್ಧಿಗೆ ಒತ್ತು: ಅನಿತಾಕುಮಾರಸ್ವಾಮಿ
ಬೆಂಗಳೂರು ಸ್ಫೋಟ: ಇಬ್ಬರು ಶಂಕಿತ ಉಗ್ರರ ಬಂಧನ
ಹಲ್ಲೆ:ತಪ್ಪಿತಸ್ಥರ ವಿರುದ್ಧ ಕ್ರಮ-ಯಡಿಯೂರಪ್ಪ
ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯ ಕಾರಣ: ವರ್ತೂರು
ಇದು ಪ್ರಜಾಪ್ರಭುತ್ವದ ಸೋಲು: ಆರ್‌.ವಿ.ದೇಶಪಾಂಡೆ