ಊಟದಲ್ಲಿ ವಿಷ ಬೆರೆಸಿ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿ.ವೆಂಕಟರೆಡ್ಡಿ (54), ಪತ್ನಿ ಸಂಜೀವಕುಮಾರಿ (50) ಹಾಗೂ ಮಗಳು ದಿವ್ಯಾ (23) ಮೃತಪಟ್ಟವರು. ವಿಷ ಸೇವಿಸಿಯೂ ಸಾವಿನಿಂದ ಪಾರಾಗಿರುವ ನಾಗರತ್ನ(20) ಯಶವಂತಪುರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದಿವ್ಯಾ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು.
ವೆಂಕಟರೆಡ್ಡಿ ಅವರು ಐಎಸ್ಐ ಸಂಸ್ಥೆಯ ಲ್ಯಾಬ್‌ನಲ್ಲಿ ಅಧಿಕಾರಿಯಾಗಿದ್ದರು. ಅವರ ಮಡದಿ ಗಾರ್ಮೆಂಟ್ ಸಂಸ್ಥೆ ನಡೆಸುತ್ತಿದ್ದರು.
ಸಂಜೀವ ಕುಮಾರಿ ನಡೆಸುತ್ತಿದ್ದ ಗಾರ್ಮೆಂಟ್ ನಷ್ಟ ಅನುಭವಿಸಿತ್ತು ಎನ್ನಲಾಗಿದೆ. ಇದರಿಂದ ಹೆದರಿ ಕಂಗಾಲಾದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಗರತ್ನ ಅವರಿಗೆ ಎಚ್ಚರವಾದಾಗ ತಂದೆ ತಾಯಿ ಹಾಗೂ ಸಹೋದರಿ ಮೃತಪಟ್ಟಿರುವುದನ್ನು ಕಂಡು ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
|