ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದರಾಮಯ್ಯ ಹೊಸ ಪಕ್ಷ ರಚನೆ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದರಾಮಯ್ಯ ಹೊಸ ಪಕ್ಷ ರಚನೆ ?
NRB
ರಾಜ್ಯದಲ್ಲಿ ಉಪಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಎಲ್ಲೂ ಕಾಣಸಿಗುತ್ತಿಲ್ಲ. ಕಾಂಗ್ರೆಸ್‌‌ನಿಂದ ದೂರವಾಗುತ್ತಿರುವ ಸಿದ್ದರಾಮಯ್ಯ ಕೇರಳದಲ್ಲಿದ್ದು ಹೊಸ ಪಕ್ಷ ರಚನೆಯತ್ತ ಕಾರ್ಯೋನ್ಮುಖರಾಗಿದ್ದಾರೆ ಎನ್ನುವುದು ಈಗ ರಾಜಕೀಯ ಆಸಕ್ತರ ಕುತೂಹಲ ಕೆರಳಿಸಿದೆ.

ವೈರಿಯ ವೈರಿ ಸ್ನೇಹಿತ ಎಂಬ ಮಾತಿನಂತೆ ಹೊಸ ಪಕ್ಷ ರಚಿಸಿ ಬಿಜೆಪಿ ಜೊತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಅವರ ಉದ್ದೇಶ ಎಂದು ಹೇಳಲಾಗುತ್ತಿದೆ. ಆ ಮೂಲಕ ತಮಗೆ ಎರಡು ಬಗೆದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ಪಣತೊಟ್ಟಿದ್ದಾರೆ.

ಮಾನಸಿಕವಾಗಿ ಕಾಂಗ್ರೆಸ್‌ನಿಂದ ದೂರ ಉಳಿದಿರುವ ಸಿದ್ದರಾಮಯ್ಯ ತಾಂತ್ರಿಕವಾಗಿ ಪಕ್ಷದಲ್ಲಿದ್ದಾರೆ ಅಷ್ಟೇ. ತಾವಾಗಿಯೇ ಕಾಂಗ್ರೆಸ್ ಬಿಡುವುದರ ಬದಲು ಪಕ್ಷ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದುನೋಡುವ ನಿರ್ಧಾರಕ್ಕೆ ಬಂದಿದ್ದು, ಈ ಅವಧಿಯಲ್ಲಿ ಹೊಸ ಪಕ್ಷಕ್ಕೆ ರೂಪುರೇಷೆ ಸಿದ್ಧಪಡಿಸುವುದು ಅವರ ಗುರಿ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಕಾಂಗ್ರೆಸ್ ಬಿಡುವುದಿಲ್ಲ ಎನ್ನುತ್ತಿದ್ದ ಕಟ್ಟಾ ಬೆಂಬಲಿಗರೂ ಕೂಡ ಈಗ ಹೊಸ ಪಕ್ಷ ರಚನೆ ಮಾಡುವುದು ನಿಶ್ಚಿತ ಎಂದು ಹೇಳುತ್ತಿರುವುದು ಪಕ್ಷ ರಚಿಸುವ ಸಾಧ್ಯತೆಗಳ ಸುಳಿವು ನೀಡಿದೆ.

ಹೊಸಪಕ್ಷ ರಚಿಸುವ ಮೂಲಕ ವಿಧಾನಸಭೆಯಲ್ಲಿ 20 ರಿಂದ 30 ಸ್ಥಾನಗಳನ್ನು ಪಡೆದು ಸಿಎಂ ಪಟ್ಟಕ್ಕೆ ಪಟ್ಟು ಹಿಡಿಯುವುದು ಸಿದ್ದು ಕನಸಾದರೂ ಮುಂದಿನ ವಿಧಾನಸಭಾ ಚುನಾವಣೆಗಾಗಿ ಇನ್ನೂ ನಾಲ್ಕುವರೆ ವರ್ಷಗಳಷ್ಟು ಸಮಯ ಕಾಯಬೇಕಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಅಂದಾಜು ಆರೇಳು ಸೀಟುಗಳನ್ನು ಗಿಟ್ಟಿಸಿ ಕೇಂದ್ರದಲ್ಲಿ ಮಂತ್ರಿ ಪದವಿ ಪಡೆಯುವುದು ಸದ್ಯದ ಆಕಾಂಕ್ಷೆ. ಇದಕ್ಕೆ ಬಿಜೆಪಿಯೂ ಒಪ್ಪಿದ್ದು, ಕೇಂದ್ರದಲ್ಲಿ ಎನ್‌‌ಡಿಎ ಸರ್ಕಾರ ಬಂದರೆ ಸಚಿವ ಪದವಿ ನೀಡುವ ಭರವಸೆ ನೀಡಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರ ಈ ನಿರ್ಧಾರ ಬಿಜೆಪಿಗೆ ವರವಾಗುವ ಸಾಧ್ಯತೆಗಳಿದ್ದು ರಾಜ್ಯದಲ್ಲಿ ಎನ್‌‌ಡಿಎ ಮೈತ್ರಿಕೂಟಕ್ಕೆ ಬಲ ಬರಲಿದೆ. ರಾಜ್ಯದಲ್ಲಿ ಸಂಯುಕ್ತ ಜನತಾದಳವನ್ನು ಮಾತ್ರ ನೆಚ್ಚಿಕೊಂಡಿದ್ದ ಬಿಜೆಪಿಗೆ ಅಷ್ಟೇನೂ ಲಾಭದಾಯಕವಾಗಿರಲಿಲ್ಲ.

ಕೇರಳಕ್ಕೆ ತೆರಳಿರುವ ಸಿದ್ದರಾಮಯ್ಯ ಅವರೊಂದಿಗೆ ಗುಂಡ್ಲುಪೇಟೆಯ ಶಾಸಕರಾದ ಎಚ್.ಎಸ್. ಮಹದೇವ ಪ್ರಸಾದ್, ಟಿ.ನರಸೀಪುರದ ಡಾ.ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣದ ಕೆ.ವೆಂಕಟೇಶ್ ಅವರಗಳೂ ಇದ್ದು ಮೈಸೂರು ಪ್ರದೇಶದಲ್ಲಿ ಪಕ್ಷ ಕಾಂಗ್ರೆಸ್‌‌ಗೆ ಪ್ರಬಲ ಸ್ಪರ್ಧೆ ಒಡ್ಡುವುದು ಗ್ಯಾರಂಟಿಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಲಬಾಧೆ: ಕುಟುಂಬದ ಮೂವರ ಆತ್ಮಹತ್ಯೆ
ಹೊಸ ವರ್ಷಾಚರಣೆ -ಎಲ್ಲೆಡೆ ಕಟ್ಟೆಚ್ಚರ
ಸರ್ಕಾರ ಭದ್ರ - ಮಾನ ಕಳೆದುಕೊಂಡ ಕಾಂಗ್ರೆಸ್
ಪಕ್ಷೇತರರನ್ನು ಕಾಡುತ್ತಿರುವ ಆತಂಕ...
ಮಧುಗಿರಿ ಅಭಿವೃದ್ಧಿಗೆ ಒತ್ತು: ಅನಿತಾಕುಮಾರಸ್ವಾಮಿ
ಬೆಂಗಳೂರು ಸ್ಫೋಟ: ಇಬ್ಬರು ಶಂಕಿತ ಉಗ್ರರ ಬಂಧನ