ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಇದೀಗ ತುಟಿ ಬಿಚ್ಚಿರುವ ಸಚಿವ ಉಮೇಶ್ ಕತ್ತಿ ಜೆಡಿಎಸ್ ವಿರುದ್ಧವಾಗ್ದಾಳಿ ನಡೆಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಮತ್ತು ನನ್ನ ವಿರುದ್ಧ ಅನೇಕ ಆಧಾರರಹಿತ ಆರೋಪಗಳನ್ನು ಮಾಡಿರುವ ಜೆಡಿಎಸ್ ನಾಯಕರು ಅವರನ್ನೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ.
ಅನೈತಿಕ ಗೆಲುವು ಸಾಧಿಸಿದ್ದಾರೆ ಎನ್ನುವ ಪದ ಬಳಸಿರುವ ಕುಮಾರಸ್ವಾಮಿ ಅದರ ವಿವರಣೆ ನೀಡಬೇಕಾಗಿದೆ. ಅನೈತಿಕ ನಡವಳಿಕೆ ಪ್ರದರ್ಶನವನ್ನು ಮೊದಲು ಆರಂಭಿಸಿದವರು ಯಾರು ಎಂದು ಅವರು ಮರುಪ್ರಶ್ನೆ ಎಸೆದಿದ್ದಾರೆ.
ಜೆಡಿಎಸ್ ಇದೇ ರೀತಿ ರಾಜ್ಯದಲ್ಲಿ ರಾಜಕಾರಣ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಗಂಟುಮೂಟೆ ಕಟ್ಟುವ ಸ್ಥಿತಿ ಬಂದೊದಗಲಿದೆ. ರಾಜ್ಯದ ಜನರೇ ಅವರಿಗೆ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ.
|