ಉಪಚುನಾವಣೆಯಲ್ಲಿ ಗೆದ್ದು ಸರ್ಕಾರ ಭದ್ರಪಡಿಸಿಕೊಂಡ ಬಿಜೆಪಿ ಅದಾಗಲೇ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ತಾಲೀಮು ಆರಂಭಿಸಿಬಿಟ್ಟಿದೆ.
ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿರುವ ಬೆಂಗಳೂರು ಸಂಸದ ಅನಂತ್ ಕುಮಾರ್ ಭಾರತ ಉಳಿಸಲು ಬಿಜೆಪಿಗೆ ಮತ ನೀಡಿ ಎಂದು ಘೋಷಣೆ ಕೂಗುವುದರೊಂದಿಗೆ ಸಮಾರಂಭಕ್ಕೆ ಪ್ರಚಾರ ಸಭೆಯಲ್ಲಿ ಕರೆ ನೀಡಿದ್ದಾರೆ.
ಇದಷ್ಟೇ ಅಲ್ಲದೆ ಲೋಕಸಭೆಗೆ ಪಕ್ಷ ಕೈಗೊಳ್ಳುತ್ತಿರುವ ವಿವರಗಳನ್ನೂ ಅವರು ಸುದ್ದಿಗಾರರೊಂದಿಗೆ ಹಂಚಿಕೊಂಡರು. 45 ಸಾವಿರ ಬೂತ್‌ಗಳಿಗೂ ಚುನಾವಣೆ ತಾಲೀಮು ನಡೆಸಿದ್ದು, ಎಲ್ಲ ಕ್ಷೇತ್ರಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಲು ಜನವರಿ ಮೊದಲ ವಾರದಲ್ಲಿ ಬೂತ್ ಸಮಿತಿ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಪ್ರತಿಯೊಂದು ಬೂತ್‌ನಲ್ಲಿರುವ ಸಮಸ್ಯೆಗಳನ್ನು ಆಲಿಸಿ ನಿವಾರಿಸಲು ಪ್ರಯತ್ನಿಸಲಾಗುವುದು. ಅದರೊಂದಿಗೆ ಚುನಾವಣೆ ತಾಲೀಮಿಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಲಿದೆ ಎಂದು ತಿಳಿಸಿದರು.
|