ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 100 ಕೋಟಿ ರೂ.ಗೆ ಮತದಾರರ ಖರೀದಿ: ಜೆಡಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
100 ಕೋಟಿ ರೂ.ಗೆ ಮತದಾರರ ಖರೀದಿ: ಜೆಡಿಎಸ್
ಕುಮಾರಸ್ವಾಮಿ ಬಿಜೆಪಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ 100 ಕೋಟಿ ರೂ. ಖರ್ಚು ಮಾಡಿ ಮತದಾರರನ್ನು ಖರೀದಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈಗ ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಆಪರೇಷನ್ ಕಮಲದ ಮೂಲಕ ಬಂದ ಸಚಿವರೇ ಸರ್ಕಾರವನ್ನು ಅಭದ್ರಗೊಳಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಲು ಆ ಪಕ್ಷದಲ್ಲಿರುವ ಜನತಾಪರಿವಾರದ ಕೆಲವು ನಾಯಕರೇ ಕಾರಣ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು. ಉಪಚುನಾವಣೆಯ ವೇಳೆ ಬಿಜೆಪಿ ಪೊಲೀಸ್ ವಾಹನಗಳಲ್ಲೇ ಅಕ್ರಮವಾಗಿ ಸಾಗಿಸಿದ ಹಣವನ್ನು ಮತದಾರರಿಗೆ ವಿತರಿಸಿದೆ. ಈ ರೀತಿ ಆರೋಪ ಮಾಡಿದ್ದಕ್ಕೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾದರೆ ಹೂಡಲಿ ಎಂದರು.

ಬೇರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡುವುದು ಹೇಗೆಂಬುದನ್ನು ಬಿಜೆಪಿ ತೋರಿಸಿಕೊಟ್ಟಿತ್ತು. ಚುನಾವಣೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಮತದಾರರನ್ನೂ ಖರೀದಿ ಮಾಡಬಹುದು ಎಂಬುದನ್ನು ಸಾಬೀತುಪಡಿಸಿತು ಎಂದು ವ್ಯಂಗ್ಯವಾಡಿದರು. 50 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದ್ದಕ್ಕೆ ಧಕ್ಕೆ ಆಗಿದೆಯಂತೆ. ಆದರೆ, ನನ್ನ ವಿರುದ್ಧ 150ನ ಕೋಟಿ ರೂ. ಭ್ರಷ್ಟಾಚಾರದ ಆರೋಪ ಹೊರಿಸಿದಾಗ ನನ್ನ ವರ್ಚಸ್ಸಿಗೆ ಎಷ್ಟರ ಮಟ್ಟಿಗೆ ಧಕ್ಕೆ ಉಂಟಾಗಿದೆ ಎಂಬುದು ಇವರಿಗೆ ಗೊತ್ತಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದು-ಜಾಲಪ್ಪ-ಅಂಬರೀಷ್ ವಿರುದ್ಧ ದೂರು
ಭಾರತ ಉಳಿಸಲು ಬಿಜೆಪಿಗೆ ವೋಟುಕೊಡಿ: ಅನಂತ್ ಕುಮಾರ್
ಮಂಡ್ಯಕ್ಕೆ ನೂತನ ಜಿಲ್ಲಾಧಿಕಾರಿ ನೇಮಕ
ಜೆಡಿಎಸ್ ವಿರುದ್ಧ ಉಮೇಶ್ ಕತ್ತಿ ಕಿಡಿ
ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ: ಜೆಡಿಎಸ್
ಪಕ್ಷ ಸಂಘಟನೆಗೆ ಪಾದಯಾತ್ರೆ: ಕುಮಾರಸ್ವಾಮಿ