ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಧಾರವಾಡ: ಗಾಂಧಿ ಪ್ರತಿಮೆ ವಿರೂಪ-ಗ್ರಾಮಸ್ಥರಿಂದ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧಾರವಾಡ: ಗಾಂಧಿ ಪ್ರತಿಮೆ ವಿರೂಪ-ಗ್ರಾಮಸ್ಥರಿಂದ ಪ್ರತಿಭಟನೆ
ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಹಾಳು ಮಾಡಿದ್ದರಿಂದ ತಾಲೂಕಿನ ಗರಗ ಗ್ರಾಮದಲ್ಲಿ ಗುರುವಾರ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರು ಬಂದ್ ಆಚರಿಸಿ ರಾಷ್ಟ್ರಪಿತನಿಗೆ ಅಗೌರವ ತೋರಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಹೊಸ ವರ್ಷದ ಮೊದಲ ದಿನ ಮುಂಜಾನೆ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಪ್ರತಿಮೆಯ ಕಿವಿ, ಮೂಗು, ಕಾಲು ಹಾಗೂ ಇತರ ಅಂಗಗಳೊಂದಿಗೆ ಕನ್ನಡಕ ಕೂಡಾ ಮುರಿದಿತ್ತು. ಇದನ್ನು ವಿರೋಧಿಸಿ ಗ್ರಾಮಸ್ಥರು ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿದ್ದು, ಇದರಿಂದ ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾ ನಿರತರನ್ನು ಅಲ್ಲಿಂದ ಚದುರಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮಕ್ಕೆ ಆಗಮಿಸಿದ ಎಸ್ಪಿ ಪ್ರಕಾಶ್ ಹಾಗೂ ಉಪ ವಿಭಾಗಾಧಿಕಾರಿ ಮಹಂತೇಶ್ ಬಿಳಿಗಿ ಜ. 26ರ ಒಳಗೆ ಪ್ರತಿಮೆ ಸರಿಪಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಂತಿತು. ಗರಗ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಕೆಲವರು ಕುಡಿದ ಅಮಲಿನಲ್ಲಿ ಗಾಂಧಿ ಪ್ರತಿಮೆಗೆ ಕಲ್ಲು ತೂರಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರಿಗೆ ಯಡಿಯೂರಪ್ಪ ಹೊಸ ವರ್ಷದ ಗಿಫ್ಟ್ !
ಎಲ್‌ಪಿಜಿ ಟ್ಯಾಂಕರ್ ಮುಷ್ಕರ
ಡಿಕೆಶಿ, ದೇಶಪಾಂಡೆ ಸೋನಿಯಾ ಭೇಟಿ
100 ಕೋಟಿ ರೂ.ಗೆ ಮತದಾರರ ಖರೀದಿ: ಜೆಡಿಎಸ್
ಸಿದ್ದು-ಜಾಲಪ್ಪ-ಅಂಬರೀಷ್ ವಿರುದ್ಧ ದೂರು
ಭಾರತ ಉಳಿಸಲು ಬಿಜೆಪಿಗೆ ವೋಟುಕೊಡಿ: ಅನಂತ್ ಕುಮಾರ್