ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ನೂತನ ಸದಸ್ಯರಾದ ಶಿವನಗೌಡ ನಾಯಕ್, ಆನಂದ್ ಅಸ್ನೋಟಿಕ್ ಹಾಗೂ ಜೆ.ನರಸಿಂಹಸ್ವಾಮಿ ಅವರು ಶುಕ್ರವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸದಸ್ಯರಿಗೆ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಪ್ರಮಾಣವಚನ ಬೋಧಿಸಿದರು.
ಶಿವನಗೌಡ ನಾಯಕ್ ಅವರು ಸತ್ಯ, ನಿಷ್ಠೆ ಹೆಸರಲ್ಲಿ,ಅಸ್ನೋಟಿಕರ್ ಹಾಗೂ ನರಸಿಂಹಸ್ವಾಮಿ ಭಗವಂತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಪ್ರಮುಖರು ಹಾಜರಿದ್ದರು. |