ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜ.16ರಿಂದ ಅಂತಾರಾಷ್ಟ್ರೀಯ ಚಿತ್ರೋತ್ಸವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ.16ರಿಂದ ಅಂತಾರಾಷ್ಟ್ರೀಯ ಚಿತ್ರೋತ್ಸವ
ಮೂರನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಜನವರಿ 16 ರಿಂದ 22ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿರುವ ಚಿತ್ರಗಳ ಆಯ್ಕೆ ಮುಗಿದಿದ್ದು, ಚಿತ್ರ ಪ್ರದರ್ಶನ ಸಮಯವನ್ನು ನಿಗದಿಪಡಿಸುವಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ ಮಗ್ನವಾಗಿದೆ.

ಚಿತ್ರೋತ್ಸವದಲ್ಲಿ ಭಾರತ ಸೇರಿದಂತೆ 35 ದೇಶಗಳ ಒಟ್ಟು 140 ಚಿತ್ರಗಳು ಪ್ರದರ್ಶನವಾಗಲಿದೆ. ಜಾಗತಿಕ ಸಿನಿಮಾ, ಸ್ಮರಣೆ, ಸರ್ವಶ್ರೇಷ್ಠ ಚಿತ್ರಗಳು, ಮಕ್ಕಳ ಚಿತ್ರಗಳು, ಬರಹಗಾರ ಹಾಗೂ ನಿರ್ದೇಶಕರ ಚಿತ್ರಗಳು ಹಾಗೂ ಚಿತ್ರಭಾರತಿ ಮೊದಲಾದ ವಿಭಾಗದಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಜೊತೆಗೆ 25 ಸಾಕ್ಷ್ಯಚಿತ್ರಗಳೂ ತೆರೆಯಲ್ಲಿ ಕಂಡುಬರಲಿದೆ ಎಂದು ಚಲನಚಿತ್ರೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ವಿ.ಎನ್.ಸುಬ್ಬರಾವ್ ತಿಳಿಸಿದ್ದಾರೆ.

ಚಿತ್ರೋತ್ಸವದಲ್ಲಿ ಚಿತ್ರಪ್ರದರ್ಶನದ ಜೊತೆಗೆ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿನಿಮಾಗಳಲ್ಲಿ ಧ್ವನಿ ಹಾಗೂ ಆನಿಮೇಷನ್ ಕುರಿತು ಕಾರ್ಯಾಗಾರಗಳು ವಿಷನ್ ಸಿನಿಮಾಸ್‌‌ನಲ್ಲಿ ನಡೆಯಲಿದೆ. ಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡದ 28 ಸಿನಿಮಾಗಳು ಚಿತ್ರೋತ್ಸವದಲ್ಲಿ ತೆರಗೆ ಬರಲಿದೆ. ಇಟಲಿಯ 10 ಸಿನಿಮಾ, ನಾರ್ವೆಯ 4 ಸಿನಿಮಾ, ಪೋಲೆಂಡ್‌ನ 5, ಇಸ್ರೆಲ್ ಹಾಗೂ ಫ್ರಾನ್ಸ್‌ನ ತಲಾ 6 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಚಿತ್ರೋತ್ಸವ ನಡೆಯಲಿರುವ ಸ್ಥಳ: ಕೆ.ಎಚ್.ರಸ್ತೆಯ ವಿಷನ್ ಸಿನಿಮಾಸ್, ಕೆ,ಎಚ್.ಪಾಟೀಲ್ ಸಭಾಂಗಣ, ಎನ್.ಆರ್.ವೃತ್ತದಲ್ಲಿನ ಬಾದಾಮಿ ಹೌಸ್ ಮತ್ತು ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ.

ಪ್ರದರ್ಶನಗೊಳ್ಳಿರುವ ಚಿತ್ರಗಳು: ಗುಲಾಬಿ ಟಾಕೀಸ್ (ಕನ್ನಡ), ಬನದ ನೆರಳು(ಕನ್ನಡ), ಕಾಂಚಿವರಂ(ತಮಿಳು), ಸಮ್ಮರ್-2007(ಹಿಂದಿ) ಯರ್ವಾಂಗ್ (ತ್ರಿಪುರಾ), ಶ್ರೇಯೋಭೀಲಾಷಂ (ತೆಲುಗು), ಅತ್ಯಯಾಲಂಗಳ್(ಮಲಯಾಳಂ), ಮಹಾಸತ್ತ (ಮರಾಠಿ)

ಪ್ರಮುಖ ಕನ್ನಡ ಚಿತ್ರಗಳು: ಅಮರಶಿಲ್ಪಿ ಜಕಣಾಚಾರಿ, ಸತ್ಯ ಹರಿಶ್ಚಂದ್ರ, ಮುನ್ನುಡಿ, ಅರ್ಥ, ಮಾತಾಡ್ ಮಾತಾಡ್ ಮಲ್ಲಿಗೆ, ಸಂಗೀತ, ಅವ್ಯವಸ್ಥೆ, ಮತದಾನ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡ ನಾಮಫಲಕ: ಒಂದು ವಾರ ಗಡುವು
ಸಿದ್ದರಾಮಯ್ಯ ಬಿಜೆಪಿ ಸೇರಲಿ: ನರೇಂದ್ರಸ್ವಾಮಿ
ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕಾರ
ಡಿ.ಟಿ.ಜಯಕುಮಾರ್ ಮರಳಿ ಜೆಡಿಎಸ್‌‌ಗೆ
ಕುಮಾರಸ್ವಾಮಿಗೆ ಚುನಾವಣಾ ಆಯೋಗದಿಂದ ನೋಟಿಸ್
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ