ಚಿಕ್ಕಮಗಳೂರಿನ ದತ್ತಪೀಠ ವಿವಾದ ಮತ್ತೆ ಜೀವತಳೆದಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದವರ ವಿರುದ್ಧ ದಾಖಲಾದ ದೂರುಗಳನ್ನು ವಾಪಸ್ ಪಡೆಯಲು ನಿರ್ಧರಿಸಿರುವ ಸಚಿವ ಸಂಪುಟದ ನಿರ್ಧಾರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ,ಈ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮು ಸೌಹಾರ್ದತೆಗೆ ದಕ್ಕೆ ತಂದು ಶಾಂತಿ ಭಂಗವನ್ನುಂಟು ಮಾಡಿದ ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ಇರುವ ದೂರುಗಳನ್ನು ಹಿಂಪಡೆಯಲು ನಿರ್ಧರಿಸಿರುವುದು ಭಾಜಪದ ನಿಜಬಣ್ಣ ಬಯಲಾದಂತಾಗಿದೆ ಎಂದು ದೂರಿದರು.
ಸಂಘಪರಿವಾದವರ ವಿರುದ್ಧ ದಾಖಲಾದ ದೂರುಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ನಿರ್ಧರಿಸಿರುವುದು ಕಾನೂನು ಬಾಹಿರ ಮತ್ತು ಇದು ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ.
|