ನಗರದ ಮುರುಗೇಶಿ ಪಾಳ್ಯದ ಕಾವೇರಿ ಲೇಔಟ್‌ನಲ್ಲಿ ಮತಾಂತರಕ್ಕೆ ಕುಮ್ಮುಕ್ಕು ನೀಡುತ್ತಿದ್ದರು ಎಂದು ಆರೋಪಿಸಿ ಮೂರು ಮಂದಿಯನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಕಾವೇರಿ ಲೇಔಟ್‌ನ 5ನೇ ಅಡ್ಡರಸ್ತೆಯಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ರಾಮರೆಡ್ಡಿ, ಮೈಕೋ ಬಾರ್ಬೋಸ ಮತ್ತು ಆತನ ಪತ್ನಿ ಅಶ್ಮಿತಾ ಬಾರ್ಬೋಸ ಎಂಬುವರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳು ಪ್ರಬೋದ್ ಕುಮಾರ್ ದಾಸ್ ಎಂಬುವರ ಮನೆಗೆ ತೆರಳಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಸ್ಥಳೀಯರು ಕೂಡಲೇ ಈ ಮೂವರನ್ನು ವಶಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಆರೋಪಿಗಳ ಬಳಿ ಸಾಕಷ್ಟು ಧರ್ಮ ಪ್ರಚಾರ ಸಾಮಗ್ರಿಗಳು ಮತ್ತು ಕರಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. |