ಸಿಲಿಕಾನ್ ಸಿಟಿಯ ದೇವಾಲಯಗಳಲ್ಲಿ ಬುಧವಾರ ಬೆಳಿಗ್ಗಿನಿಂದಲೇ ಭಕ್ತರ ಸಾಲು ನೆರೆದಿತ್ತು, ವೈಕುಂಠ ಏಕಾದಶಿಯ ಸಂಭ್ರಮವಾಗಿದ್ದರಿಂದ ಇಂದು ಸ್ವರ್ಗದ ಬಾಗಿಲು ತೆರೆಯುವುದು ಎಂಬ ನಂಬಿಕೆ ಆಸ್ತಿಕರದ್ದು, ಆ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಹಬ್ಬ ವಿಜೃಂಭಣೆಯಿಂದ ನಡೆಯಿತು.
ಮಹಾಲಕ್ಷ್ಮಿ ಲೇ ಔಟ್‌ನಲ್ಲಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು, ಮಂಗಳವಾರ ಮಧ್ಯರಾತ್ರಿಯಿಂದಲೇ ಇಲ್ಲಿ ವೆಂಕಟರಮಣನಿಗೆ ವಿಶೇಷ ಪೂಜೆ, ವಿಶೇಷ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತರು ವೈಕುಂಠ ದ್ವಾರ ಪ್ರವೇಶಿಸಿ ದೇವರ ದರ್ಶನ ಪಡೆದರು.
ಮೈಸೂರು ರಸ್ತೆಯ ಕಸ್ತೂರುಬಾ ನಗರ ಪಶ್ಚಿಮ ಪೈಪ್‌ಲೈನ್‌ನಲ್ಲಿರುವ ಶ್ರೀವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶ್ರೀವೆಂಕಟರಮಣ ಸ್ವಾಮಿ ದೇವರಿಗೆ ಇಂದು ಬೆಳಿಗ್ಗಿನ ಜಾವ ರುದ್ರಾಭಿಷೇಕ ಹಾಗೂ ಶ್ರೀಪದ್ಮಾವತಿ ಸಮೇತ ವೆಂಕಟರಮಣಸ್ವಾಮಿಯ ಉತ್ಸವ ಮಾಡಲಾಯಿತು. |