ತಮಿಳುನಾಡಿನ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರಿಗೆ ಇಲ್ಲಿನ ಭಕ್ತಾದಿಗಳ ಗುಂಪೊಂದು ಘೇರಾವ್ ಹಾಕಿ ಘೋಷಣೆ ಕೂಗಿದಾಗ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.
ದೇವೇಗೌಡರು ತಮ್ಮ ಪುತ್ರ ಎಚ್.ಡಿ.ರೇವಣ್ಣ ಹಾಗೂ ಕುಟುಂಬ ವರ್ಗದವರೊಂದಿಗೆ ವೈಕುಂಠ ಏಕಾದಶಿ ಪ್ರಯುಕ್ತ ದೇವರ ದರ್ಶನಕ್ಕೆಂದು ಬುಧವಾರ ಆಗಮಿಸಿದ್ದರು.
ಅವರು ಪರಮಪದ ಹೊಸ್ತಿಲು ದಾಟಿ ರಂಗನಾಥಸ್ವಾಮಿಯ ದರ್ಶನ ಪಡೆದು ಸಾವಿರ ಕಂಬಗಳ ಮಂದಿರದ ಮುಂಭಾಗದಿಂದ ಹೊರ ಬರುತ್ತಿದ್ದಂತೆಯೇ ಕೆಲವರು ತಮಿಳರಿಗೆ ಕಾವೇರಿ ನೀರು ಕೊಡದವರು ನೀವೇಕೆ ಈ ರಾಜ್ಯಕ್ಕೆ ಬರುತ್ತೀರಿ?ಎಂದು ಷೋಷಣೆ ಕೂಗಿ ಘೇರಾವ್ ಹಾಕಲು ಯತ್ನಿಸಿದ್ದರು. ಆಗ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಸ್ಥಳಕ್ಕಾಗಮಿಸಿ ಆಕ್ರೋಶಿತ ಗುಂಪನ್ನು ಸಮಾಧಾನ ಪಡಿಸಿ ಗೌಡರ ಕುಟುಂಬ ವರ್ಗದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. |