ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಪೋಷಕರಾಗಿರುವ ತಮಿಳುನಾಡು ಪ್ರಕಾಶಕರ ಸಂಘ ಕರುಣಾನಿಧಿ ಅವರ ಹೆಸರಲ್ಲಿ ಕನ್ನಡದ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಗುರುವಾರ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ತಿಳಿಸಿದೆ.
ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ ನಗದು, ಶಾಲು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುವುದಾಗಿ ಸಂಘದ ಮೂಲಗಳು ಹೇಳಿವೆ.
ಈ ಪ್ರಕಾಶಕರ ಸಂಘ ಕರ್ನಾಟಕದ ಕಾರ್ನಾಡ್ ಸೇರಿದಂತೆ ತಮಿಳು ಲೇಖಕ ಸಿ.ಮಣಿ, ಸಣ್ಣ ಕಥೆಗಾರ ಆರ್.ಚುಡಾಮಣಿ, ನಾಟಕಕಾರ ಎನ್.ಮುತ್ತುಸ್ವಾಮಿ ಹಾಗೂ ಕವಿ ಕೆ.ನೆಡುಚೆಜಾನ್ ಹಾಗೂ ಹಿರಿಯ ಪತ್ರಕರ್ತ, ಇತಿಹಾಸಕಾರ ಎಸ್.ಮುತ್ತಯ್ಯ ಅವರನ್ನು ನಾಳೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
|