ಸಚಿವರ ಸವಲತ್ತುಗಳಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೊಸ ವರ್ಷದ ಉಡುಗೊರೆಯಾಗಿ ಸಚಿವರ ವಸತಿ ಬಾಡಿಗೆ ಭತ್ಯೆಯನ್ನು ಮಾಸಿಕ 40 ಸಾವಿರದಿಂದ 50 ಸಾವಿರಕ್ಕೇರಿಸಲು ನಿರ್ಧರಿಸಲಾಗಿದೆ.
ಭೂಮಿ ಕಟ್ಟಡ ಮತ್ತು ನಿರ್ವಹಣೆಯ ಖರ್ಚು ಏರಿರುವುದರಿಂದ ವಸತಿ ಬಾಡಿಗೆ ಭತ್ಯೆಯನ್ನು ಶೇ 20 ರಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 5 ಸಾವಿರವಿದ್ದ ನಿರ್ವಹಣಾ ಶುಲ್ಕವನ್ನು ಈಗ ಹತ್ತು ಸಾವಿರಕ್ಕೇರಿಸಲಾಗಿದೆ.
ವಸತಿ ಭತ್ಯೆ ಹೆಚ್ಚಳ ಜಾರಿಗೆ ತರಲು ಕರ್ನಾಟಕ ಸಚಿವರ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ-2008ನ್ನು ರೂಪಿಸಲಾಗಿದೆ. ಜನವರಿ 16ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು. ಸರ್ಕಾರಿ ಬಂಗಲೆಯಲ್ಲಿ ವಾಸಿಸುವ ಸಚಿವರು ವಸತಿ ಭತ್ಯೆಯನ್ನು ತೆಗೆದುಕೊಳ್ಳುವಂತಿಲ್ಲ. ಮುಖ್ಯಮಂತ್ರಿ 18 ಸಚಿವರಿಗೆ ಸರ್ಕಾರಿ ವಸತಿ ನೀಡಲಾಗಿದೆ. ಉಳಿದವರು ಸ್ವಂತ ಮನೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಮೂವರು ಬಂಗಲೆಗಳನ್ನು ಸಚಿವರಿಗಾಗಿ ಮೀಸಲಿಡಲಾಗಿದೆ.
ಸಚಿವರಿಗೆ ಸರ್ಕಾರಿ ವಸತಿ ನೀಡದೇ ಇದ್ದರೆ, ಅವರು ಲೋಕೋಪಯೋಗಿ ಇಲಾಖೆ ಅನುಮತಿ ಮೇರೆಗೆ ಮನೆ ಬಾಡಿಗೆಗೆ ಪಡೆಯಬಹುದು. |